ಅರಂಬೂರು ಸಮೀಪ ಎರಡು ಕಾರುಗಳು ಪರಸ್ಪರ ಡಿಕ್ಕಿ, ಸವಾರರಿಗೆ ಗಾಯ ಆಸ್ಪತ್ರೆ ದಾಖಲು

0

ಅರಂಬೂರು ಸಮೀಪ ಮಾಣಿ ಮೈಸೂರು ಹೆದ್ದಾರಿಯಲ್ಲಿ ಎರಡು ಕಾರುಗಳು ಮುಖಮುಖಿ ಡಿಕ್ಕಿ ಸಂಭವಿಸಿ ಕಾರುಗಳು ಜಖಂ ಗೊoಡು ಪ್ರಯಾಣಿಕರಿಗೆ ಗಾಯ ಗೊಂಡ ಘಟನೆ ಇದೀಗ ನಡೆದಿದೆ.


ಪೊನ್ನಂಪೇಟೆ ಭಾಗದಿಂದ ಮಂಗಳೂರಿನತ್ತ ತೆರಳುತ್ತಿದ್ದ ಕಾರು ಮತ್ತು ಸುಳ್ಯ ಕಡೆಯಿಂದ ಚಾಮರಾಜನಗರಕ್ಕೆ ತೆರಳುತ್ತಿದ್ದ ಕಾರಿನ ನಡುವೆ ಡಿಕ್ಕಿ ಸಂಭವಿಸಿದೆ.


ಘಟನೆಯಿಂದ ಎರಡು ಕಾರುಗಳು ಜಖಂಗೊಂಡಿದ್ದು ಕಾರಿನಲ್ಲಿದ್ದ ಸವಾರರು ಅಲ್ಪ-ಸಲ್ಪ ಗಾಯಗೊಂಡು ಸುಳ್ಯ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗಿದ್ದಾರೆ. ಹೆಚ್ಚಿನ ಮಾಹಿತಿ ಇನ್ನು ತಿಳಿಯಬೇಕಾಗಿದೆ.