ಸುರಸೈನ್ಯ ನಾಯಕನಿಗೆ ಉತ್ಸವ ಬಲಿ, ನೃತ್ಯಬಲಿಯ ಸಂಭ್ರಮ
- ನಾಳೆ ಶ್ರೀದೇವರ ದರ್ಶನಬಲಿ ಹಾಗೂ ಬಟ್ಟಲುಕಾಣಿಕೆ
ಜಾಲ್ಸೂರು ಗ್ರಾಮದ ಅಡ್ಕಾರಿನ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಪ್ರತಿಷ್ಠಾ ದಿನ ಹಾಗೂ ವರ್ಷಾವಧಿ ಜಾತ್ರೋತ್ಸವವು ಬ್ರಹ್ಮಶ್ರೀ ಕುಂಟಾರು ವಾಸುದೇವ ತಂತ್ರಿಗಳವರ ಮಾರ್ಗದರ್ಶನದಲ್ಲಿ ಫೆ. 18ರಿಂದ ಹಸಿರುವಾಣಿ ಸಮರ್ಪಣೆಯೊಂದಿಗೆ ಪ್ರಾರಂಭಗೊಂಡಿದ್ದು, ಫೆ.19ರಂದು ರಾತ್ರಿ ಸುರಸೈನ್ಯ ನಾಯಕನಾದ ಶ್ರೀ ಸುಬ್ರಹ್ಮಣ್ಯ ಸ್ವಾಮಿಗೆ ಉತ್ಸವ ಬಲಿ ಜರುಗಿತು.
ಫೆ.19ರಂದು ಬೆಳಿಗ್ಗೆ ಗಣಪತಿ ಹವನ, ಸುಬ್ರಹ್ಮಣ್ಯ ಹವನದ ಸಂಕಲ್ಪ, ಶ್ರೀ ದೇವರಿಗೆ ನವಕ ಕಲಶಾಭಿಷೇಕ, ಪರಿವಾರ ದೇವರಿಗೆ ತಂಬಿಲ, ಮಧ್ಯಾಹ್ನ ಸುಬ್ರಹ್ಮಣ್ಯ ಹವನದ ಪೂರ್ಣಾಹುತಿ, ದೇವರಿಗೆ ಮಹಾಪೂಜೆ, ಪಲ್ಲಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ಜರುಗಿತು.
ಸಂಜೆ ದೀಪಾರಾಧನೆ, ತಾಯಂಬಕ, ಶ್ರೀ ದೇವರಿಗೆ ಮಹಾಪೂಜೆ ಜರುಗಿ, ಶ್ರೀ ದೇವರ ಉತ್ಸವ ಬಲಿ ಹಾಗೂ ಭಕ್ತಾದಿಗಳಿಗೆ ಅನ್ನಸಂತರ್ಪಣೆ ಜರುಗಿತು.
ನಾಳೆ ಬೆಳಿಗ್ಗೆ ಶ್ರೀ ದೇವರ ಉತ್ಸವ ಬಲಿ , ದರ್ಶನ ಬಲಿ, ಬಟ್ಟಲುಕಾಣಿಕೆ, ರಾಜಾಂಗಣ ಪ್ರಸಾದ, ಮಹಾಪೂಜೆ, ಸಂಪ್ರೋಕ್ಷಣೆ, ಮಂತ್ರಾಕ್ಷತೆ, ಅನ್ನಸಂತರ್ಪಣೆ ಜರುಗಲಿದ್ದು , ಸಂಜೆ ಶ್ರೀ ದೇವರಿಗೆ ಮಹಾಪೂಜೆ, ಪ್ರಸಾದ ವಿತರಣೆ, ಬಳಿಕ ಅನ್ನಸಂತರ್ಪಣೆ ಜರುಗಲಿದ್ದು, ರಾತ್ರಿ
ಸಾಂಸ್ಕೃತಿಕ ಕಾರ್ಯಕ್ರಮದ ಪ್ರಯುಕ್ತ ಮಂಗಳೂರಿನ ಸಾಯಿಶಕ್ತಿ ಕಲಾ ಬಳಗದವರಿಂದ ತುಳು ಪೌರಾಣಿಕ ನಾಟಕ “ಬೊಳ್ಳಿಮಲೆತ ಶಿವಶಕ್ತಿಲು” ಪ್ರದರ್ಶನಗೊಳ್ಳಲಿದೆ.