ಪಡಿತರ ಚೀಟಿಗಳಿಗೆ ನೇರ ನಗದು ವರ್ಗಾವಣೆ(ಡಿಬಿಟಿ) ಹಣ ಬಾರದೇ ಇರುವ ಪಡಿತರ ಚೀಟಿದಾರರ, ನೇರ ನಗದು ವರ್ಗಾವಣೆ (ಡಿಬಿಟಿ) ಹಣ ಬರಲು ಈ ಸೂತ್ರಗಳನ್ನು ಅಳವಡಿಸುವಂತೆ ಆಹಾರ ಇಲಾಖೆ ತಿಳಿಸಿದೆ.
- ಪಡಿತರ ಚೀಟಿದಾರರು ತಮ್ಮ ಪಡಿತರ ಚೀಟಿಯಲ್ಲಿನ ಕುಟುಂಬ ಮುಖ್ಯಸ್ಥರ ಹೆಸರು ಅವರ ಆಧಾರ ಕಾರ್ಡ ಹೆಸರು ಸರಿಯಾಗಿದೆಯೇ ಪರೀಕ್ಷಿಸಿಕೊಳ್ಳುವುದು ಇಲ್ಲವಾದಲ್ಲಿ ನ್ಯಾಯಬೆಲೆ ಅಂಗಡಿಯಲ್ಲಿ E-KYC ಮಾಡಿಸುವುದು
- ಪಡಿತರ ಚೀಟಿಯಲ್ಲಿನ ಮುಖ್ಯಸ್ಥರ ಹೆಸರಿನಲ್ಲಿರುವ ಬ್ಯಾಂಕ್ ಖಾತೆಗೆ ಆಧಾರ ಜೋಡಣೆ ಮಾಡಿಸುವುದು. ಬ್ಯಾಂಕ್ ನಲ್ಲಿ ಖಾತೆಗೆ E-KYC ಮಾಡಿಸುವುದು. ಬ್ಯಾಂಕ್ ನಲ್ಲಿ ತಮ್ಮ ಖಾತೆಗೆ N.P.C.I ಲಿಂಕ್ ಮಾಡಿಸುವುದು.
- ಬ್ಯಾಂಕ್ ಖಾತೆ ಸರಿಯಿಲ್ಲದಿದ್ದರೆ ಹೊಸದಾಗಿ ಅಂಚೆ ಕಛೇರಿ (POST OFFICE) ಯಲ್ಲಿ ಹೊಸ IPPB ಬ್ಯಾಂಕ್ ಖಾತೆ/ ರಾಷ್ಟ್ರೀಕೃತ ಬ್ಯಾಂಕಗಳಲ್ಲಿ ಖಾತೆ ತೆರೆಯುವುದು ಈ ರೀತಿ ಮಾಡಿ ಸವಲತ್ತುಗಳನ್ನು ಪಡೆಯಬಹುದೆಂದು ತಿಳಿಸಿದೆ.