ಕೀಲಾರ್ಕಜೆ ನಿವಾಸಿ ಪ್ರಾಧ್ಯಾಪಕಿ ಅಕ್ಷತಾ ಕೆ ಆರ್ ಅವರು ಮಂಡಿಸಿದ ಮಹಾಪ್ರಬಂಧ ಡೆವೆಲಪ್ಮೆಂಟ್ ಆಫ್ ಏನ್ ಇಂಟೆಲಿಜೆಂಟ್ ಸಿಸ್ಟಮ್ ಫೋರ್ ಪರ್ಸನ್ ಡಿಟೆಕ್ಷನ್ ಇನ್ UAV/ಡ್ರೋನ್ ಇಮೇಜಸ್’ ಗೆ (Development of an Intelligent System For Person Detection in UAV/Drone Images) ಮಣಿಪಾಲ ವಿಶ್ವವಿದ್ಯಾಲಯವು ಪಿ.ಹೆಚ್ ಡಿ ಪದವಿ ಪ್ರದಾನ ಮಾಡಿದೆ.
ಅಕ್ಷತಾ ಕೆ ಆರ್ ಅವರು ದೊಡ್ಡತೋಟ ಸಮೀಪದ ದಿ.ಕೀಲಾರ್ಕಜೆ ರಾಧಾಕೃಷ್ಣ ಭಟ್ ಹಾಗು ಶ್ರೀಮತಿ ದೇವಕಿ ಕೆ ಅರ್ ಅವರ ಪುತ್ರಿ. ಷಣ್ಮುಖರಾಜ ಎಂ ಅವರ ಪತ್ನಿ.
ಪ್ರಸ್ತುತ ಮಣಿಪಾಲ್ ಎಂಜಿನಿಯರಿಂಗ್ ಕಾಲೇಜಿನ ಎಲೆಕ್ಟ್ರಾನಿಕ್ಸ್ ವಿಭಾಗದ ಸಹ ಪ್ರಾಧ್ಯಾಪಕಿಯಾಗಿರುವ ಅವರು ತನ್ನ ಮಹಾಪ್ರಬಂಧವನ್ನು ಡಾ. ಕರುಣಾಕರ ಎ. ಕೋಟೆಗಾರ್ ಹಾಗು ಡಾ. ಸತೀಶ್ ಶೆಣೈ ಬಿ. ಅವರ ಮಾರ್ಗದರ್ಶನದಲ್ಲಿ ಮಂಡಿಸಿರುತ್ತಾರೆ.
ಬೊಳ್ಳಾಜೆ ಶ್ರೀ. ಶಾರದಾ ಅನುದಾನಿತ ಹಿ.ಪ್ರಾ.ಶಾಲಾ, ಸುಳ್ಯ ಶಾರದಾ ಕಾಲೇಜಿನ ಹಳೆ ವಿದ್ಯಾರ್ಥಿನಿ. ಕೆವಿಜಿ ಇಂಜಿನಿಯರಿಂಗ್ ಕಾಲೇಜಿನ ಪ್ರಾಧ್ಯಾಪಕಿಯಾಗಿದ್ದರು.