ಪಂಜ: ಶ್ರೀ ದೇವರಿಗೆ ರಂಗ ಪೂಜೆ-ಬೀದಿ ನೇಮ

0

(ಇಂದು) ಫೆ.23:ಶ್ರೀ ಆದಿ ಬೈದೇರುಗಳ ನೇಮೋತ್ಸವ

ಪಂಜ ಸೀಮೆಯ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಾಲಯದಲ್ಲಿ
ಫೆ.22.ರಂದು ರಾತ್ರಿ ಶ್ರೀ ದೇವರಿಗೆ ರಂಗಪೂಜೆ , ಬೀದಿ ನೇಮ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿ ಯವರ ನೇತೃತ್ವದಲ್ಲಿ ಜರುಗಿತು.

ರಂಗ ಪೂಜೆ ಬಳಿಕ ಶ್ರೀ ದೇವರ ಬಲಿ ,ದೈವಗಳ ನೇಮ , ಪ್ರಸಾದ ವಿತರಣೆ ,ಅನ್ನಸಂತರ್ಪಣೆ ಜರುಗಿತು.
ದೇವಳದ ಉತ್ಸವ ಸಮಿತಿ ಅಧ್ಯಕ್ಷ ಡಾ.ದೇವಿಪ್ರಸಾದ್ ಕಾನತ್ತೂರ್, ಉತ್ಸವ ಸಮಿತಿ ಸದಸ್ಯರು,ಸೀಮೆಯ ನೂರಾರು ಭಕ್ತರು ಪಾಲ್ಗೊಂಡಿದ್ದರು.
ಫೆ.23: ಬೈದೆರುಗಳ ನೇಮ:
ಶ್ರೀ ಆದಿ ಬೈದೇರುಗಳ ಗರಡಿಯಲ್ಲಿ
ಫೆ.23.ರಂದು ಶ್ರೀ ಆದಿ ಬೈದೇರುಗಳ ನೇಮೋತ್ಸವವು ಜರುಗಲಿದೆ.