ವಿನೋಬನಗರ ವಿವೇಕಾನಂದ ಶಾಲೆಯಲ್ಲಿ ಸಂಸ್ಥಾಪಕರ ವಿಶ್ವ ಚಿಂತನ ದಿನಾಚರಣೆ

0

ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ನ ಸಂಸ್ಥಾಪಕರಾದ ರಾಬರ್ಟ್ ಸ್ಟಿಫ್ಫನ್ ಸನ್ ಸ್ಮಿತ್ ಬೇಡನ್ ಪೋವೆಲ್ ರ ಹುಟ್ಟುಹಬ್ಬ ಮತ್ತು ವಿಶ್ವ ಚಿಂತನ ದಿನಾಚರಣೆಯನ್ನು ಸ್ಕೌಟ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ಪುಷ್ಪಾರ್ಚನೆ ಮಾಡುವುದರೊಂದಿಗೆ ಫೆ. 22ರಂದು ಆಚರಿಸಿದರು. ಸಂಸ್ಥಾಪಕರ ಜೀವನ ಚರಿತ್ರೆ, ಸ್ಕೌಟ್ ಮತ್ತು ಗೈಡ್ ಸಂಸ್ಥೆಯು ಜನ್ಮ ತಾಳಿದ ವಿಷಯವನ್ನು ಸಂಸ್ಥೆಯ ಗೈಡ್ಸ್ ಕ್ಯಾಪ್ಟನ್ ಆಗಿರುವ ಪೂರ್ಣಿಮಾ ತಿಳಿಸಿದರು. ಸಂಸ್ಥೆಯ ಸ್ಕೌಟ್ ಮಾಸ್ಟರ್ ಆಗಿರುವ ಲೀಲಾವತಿ ಕಾರ್ಯಕ್ರಮ ಸಂಘಟಿಸಿದರು. ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಾಪಕರು ಉಪಸ್ಥಿತರಿದ್ದರು.