ಭಾರತೀಯ ವೈದ್ಯಕೀಯ ಸಂಘ ಸುಳ್ಯ ಶಾಖೆ ವತಿಯಿಂದ “ಆರೋಗ್ಯ ಜಾಗೃತಿ ಕಾರ್ಯಕ್ರಮ”

0

ಭಾರತೀಯ ವೈದ್ಯಕೀಯ ಸಂಘ ಸುಳ್ಯ ಶಾಖೆ, ಸರಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದ ಸಂಯುಕ್ತ ಆಶ್ರಯದಲ್ಲಿ ” ಆರೋಗ್ಯ ಜಾಗೃತಿ ಕಾರ್ಯಕ್ರಮದಲ್ಲಿ “ಮದ್ಯ ವ್ಯಸನ ಕುಟುಂಬ” ಎಂಬ ವಿಷಯದಲ್ಲಿ ಫೆ. 23 ರಂದು ಸುಳ್ಯದ ಸರಕಾರಿ ಪದವಪೂರ್ವ ಕಾಲೇಜು ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾರತೀಯ ವೈದ್ಯಕೀಯ ಸಂಘ ಸುಳ್ಯ ಶಾಖೆಯ ಅಧ್ಯಕ್ಷೆ ಡಾ . ವೀಣಾ ಎನ್.ಮಾತನಾಡಿ, ಇಂದಿನ ಕಾಲದಲ್ಲಿ ವಿದ್ಯಾರ್ಥಿಗಳು ಜೀವನ ದಾರಿ ತಪ್ಪಿ ಹೋಗುತ್ತಿದೆ.

ಅದರಲ್ಲೂ ತಂಬಾಕು, ಮದ್ಯಪಾನ ಸೇವನೆಯಿಂದ ಮನುಷ್ಯನ ಆರೋಗ್ಯದ ಮೇಲೆ ಯಾವ ರೀತಿ ಪರಿಣಾಮ ಹಾಗೂ ದುಶ್ಚಟಗಳಿಂದ ದೂರ ವಿರುವುದು ಮತ್ತು ಮುಂಜಾಗೃತ ಕ್ರಮ ವಹಿಸುವ ಮತ್ತು ವಿಧ್ಯಾರ್ಥಿಗಳು ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದ ಮೌಲ್ಯಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ಕಾರ್ಯವನ್ನು ನೀಡಿದರು.

ಬಳಿಕ ವಿದ್ಯಾರ್ಥಿಗಳಿಗೆ ಏರ್ಪಡಿಸಿದ ಮದ್ಯ ವ್ಯಸನಿ ತಂದೆ ತಾಯಿ – ಮಕ್ಕಳು ವಿಷಯದಲ್ಲಿ ಕವನ, ಚಿತ್ರ ರಚನೆ, ಪ್ರಬಂಧ ಸ್ಪರ್ಧೆಯನ್ನು 8, ಮತ್ತು 9 ನೆ ತರಗತಿಯ ಎಲ್ಲಾ ವಿದ್ಯಾರ್ಥಿಗಳಿಗೆ ನಡೆಸಲಾಗಿತ್ತು. ಅದರಲ್ಲಿ ವಿಜೇತರಾದ ಪ್ರತೀ ತರಗತಿಯ 3 ವಿದ್ಯಾರ್ಥಿಗಳಿಗೆ ಡಾ. ವೀಣಾ ಎನ್ ಬಹುಮಾನವನ್ನು ವಿತರಿಸಿದರು., ಅಶೋಕ್ ಪ್ರಭು ಬಹುಮಾನದ ಪ್ರಾಯೋಜಕತ್ವವನ್ನು ವಹಿಸಿದರು.

ಈ ಸಂದರ್ಭದಲ್ಲಿ ಸದಸ್ಯ ಭಾರತೀಯ ವೈದ್ಯಕೀಯ ಸಂಘ ಸುಳ್ಯ ಶಾಖೆಯ ಡಾ. ಸಾಯಿಗೀತಾ, ಹಿರಿಯ ಶಿಕ್ಷಕ ಡಾ. ಸುಂದರ ಕೇನಾಜೆ, ಶಿಕ್ಷಕ ವೃಂದ -ವಿದ್ಯಾರ್ಥಿಗಳು ಉಪಸ್ಥಿತರಿದ್ದರು.ಡಾ. ಸುಂದರ ಕೇನಾಜೆ ಸ್ವಾಗತಿಸಿ, ಮಮತಾ.ಎನ್. ಜೆ ನಿರೂಪಿಸಿ ವಂದಿಸಿದರು.