ಸುಳ್ಯ ವೆಂಕಟರಮಣ ಸೊಸೈಟಿ ಬೆಳ್ಳಿಹಬ್ಬ ಆಚರಣೆ ಪ್ರಯುಕ್ತ ಕ್ರೀಡಾ ಸಮ್ಮಿಲನ

0

ಎಂ.ಜಿ.ಎಂ. ವಿದ್ಯಾಸಂಸ್ಥೆಗಳ ಶಾಲಾ 2 ಕೊಠಡಿಗಳಿಗೆ ಗುದ್ದಲಿಪೂಜೆ

ಸುಳ್ಯದಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಶ್ರೀ ವೆಂಕಟರಮಣ ಕ್ರೆಡಿಟ್ ಕೋ- ಆಪರೇಟಿವ್ ಸೊಸೈಟಿಯ ಬೆಳ್ಳಿಹಬ್ಬದ ಪ್ರಯುಕ್ತ ಮಹಾತ್ಮಗಾಂಧಿ ಮಲ್ನಾಡ್ ವಿದ್ಯಾಸಂಸ್ಥೆಗಳ ಶಾಲಾ 2 ಕೊಠಡಿಗಳಿಗೆ ಗುದ್ದಲಿಪೂಜೆ ಹಾಗೂ ಕ್ರೀಡಾ ಸಮ್ಮಿಲನ ಕೊಡಿಯಾಲಬೈಲು ಎಂ.ಜಿ.ಎಂ. ಶಿಕ್ಷಣ ಸಂಸ್ಥೆಗಳ ವಠಾರದಲ್ಲಿ ನಡೆಯಿತು.

ಹಿರಿಯ ಕ್ರೀಡಾಪಟು ಬಾಲಕೃಷ್ಣ ಗೌಡ ಕುದ್ವ ಕಾರ್ಯಕ್ರಮ ಉದ್ಘಾಟಿಸಿದರು. “ಕ್ರೀಡೆ ಪ್ರತಿಯೊಂದು ಜೀವಿಯ ಅವಿಭಾಜ್ಯ ಅಂಗ. ಕ್ರೀಡೆಯಲ್ಲಿ ತೊಡಗಿಸಿಕೊಂಡಾಗ ದೇಹದ ರಕ್ಷಣೆ, ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯ. ನಮ್ಮಲ್ಲಿ ಕೌಶಲ್ಯವೂ ವೃದ್ಧಿಯಾಗುತ್ತದೆ. ನಿರಂತರವಾಗಿ ಕ್ರೀಡಾ ಅಭ್ಯಾಸದಲ್ಲಿ ತೊಡಗಿಸಿಕೊಂಡಾಗ ಯಶಸ್ಸು ಲಭಿಸುತ್ತದೆ ” ಎಂದು ಹೇಳಿದರು.

ಶ್ರೀ ವೆಂಕಟರಮಣ ಕ್ರೆಡಿಟ್ ಕೋ- ಆಪರೇಟಿವ್ ಸೊಸೈಟಿ ಇದರ ಅಧ್ಯಕ್ಷ ಪಿ.ಸಿ.ಜಯರಾಮರು ಅಧ್ಯಕ್ಷತೆ ‌ವಹಿಸಿ, ಶಾಲಾ ಕೊಠಡಿಗಳ ನಿರ್ಮಾಣಕ್ಕೆ ಗುದ್ದಲಿಪೂಜೆ ನೆರವೇರಿಸಿದರು.

ವಿಶ್ರಾಂತ ದೈಹಿಕ ಶಿಕ್ಷಣ ನಿರ್ದೇಶಕ ರಾಧಾಕೃಷ್ಣ ಮಾಣಿಬೆಟ್ಟು, ಸುಳ್ಯ ಗೌಡ ಸೋಶಿಯೋ ಎಜ್ಯುಕೇಶನ್ ಫೌಂಡೇಶನ್ ಅಧ್ಯಕ್ಷ ಚಂದ್ರಾ ಕೋಲ್ಚಾರ್ ಮುಖ್ಯ ಅತಿಥಿಗಳಾಗಿದ್ದರು.

ಎಂ.ಜಿ.ಎಂ.ಶಾಲಾ ಸಂಚಾಲಕ ದೊಡ್ಡಣ್ಣ ಬರೆಮೇಲು, ಶ್ರೀ ವೆಂಕಟರಮಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ನಿರ್ದೇಶಕರುಗಳಾದ ಜಾಕೆ ಸದಾನಂದ, ನಿತ್ಯಾನಂದ ಮುಂಡೋಡಿ, ಕೆ.ಸಿ.ಸದಾನಂದ, ಪಿ.ಎಸ್.ಗಂಗಾಧರ್, ದಾಮೋದರ ನಾರ್ಕೋಡು, ಜಯಲಲಿತಾ ಕೆ.ಎಸ್., ನಳಿನಿ ಸೂರಯ್ಯ, ಲತಾ ಎಸ್ ಮಾವಜಿ, ಹೇಮಚಂದ್ರ ಐ.ಕೆ., ನವೀನ್ ಚಂದ್ರ ಜೆ.ವಿ., ಎಂ.ಜಿ.ಎಂ. ಶಾಲಾ ಮುಖ್ಯೋಪಾಧ್ಯಾಯಿನಿ ವಿಜಯಲಕ್ಷ್ಮಿ , ಪಿಟಿಎ ಅಧ್ಯಕ್ಷೆ ಪೂಜಾ ಆಲೆಟ್ಟಿ ಉಪಸ್ಥಿತರಿದ್ದರು.

ಬ್ಯಾಂಡ್ ಸೆಟ್ ಕೊಡುಗೆ : ಸೊಸೈಟಿ ನಿರ್ದೇಶಕ ಕೆ.ಸಿ.ಸದಾನಂದರ ಪುತ್ರ ಅರ್ಜುನ್ ಕುರುಂಜಿಯವರು ರೂ.35 ಸಾವಿರ ವೆಚ್ಚದಲ್ಲಿ ಎಂ.ಜಿ.ಎಂ. ಶಾಲೆಗೆ‌ ಬ್ಯಾಂಡ್ ಸೆಟ್ ಕೊಡುಗೆಯಾಗಿ ನೀಡಿದ್ದು, ಅದನ್ನು ಸಮಾರಂಭಲ್ಲಿ ಕೆ.ಸಿ.ಸದಾನಂದರು ಶಾಲೆಯ ಮುಖ್ಯಸ್ಥರಿಗೆ ಹಸ್ತಾಂತರ ಮಾಡಿದರು. ಬಳಿಕ ಸದಾನಂದರನ್ನು ಸಂಸ್ಥೆಯ ವತಿಯಿಂದ ಗೌರವಿಸಲಾಯಿತು.

ಸೊಸೈಟಿಯ‌ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಟಿ.ವಿಶ್ವನಾಥ ಸ್ವಾಗತಿಸಿದರು. ನಿರ್ದೇಶಕ ದಿನೇಶ್ ಮಡಪ್ಪಾಡಿ ಕಾರ್ಯಕ್ರಮ ನಿರೂಪಿಸಿದರು. ಸೊಸೈಟಿಯ ಪ್ರಧಾನ ವ್ಯವಸ್ಥಾಪಕರಾದ ಚಂದ್ರಶೇಖರ ಮೇರ್ಕಜೆ ವಂದಿಸಿದರು.