ಅಡಿಕೆ ಅಕ್ರಮ ಆಮದಿನಿಂದಾಗಿ ಅಡಿಕೆ ಬೆಳೆಗಾರರು ಸಂಕಷ್ಟದಲ್ಲಿ

0

ಕೇಂದ್ರ ಸರಕಾರ ಮತ್ತು ಕ್ಯಾಂಪ್ಕೋ ನಿಲುವಿಗೆ ಎಂ ವೆಂಕಪ್ಪ ಗೌಡ ಖಂಡನೆ

ವಿದೇಶಿ ಅಡಿಕೆ ಅಕ್ರಮ ಆಮದಿನಿಂದಾಗಿ ದೇಶೀ ಮಾರುಕಟ್ಟೆಯಲ್ಲಿ ಅತಂತ್ರ ಪರಿಸ್ಥಿತಿ ನಿರ್ಮಾಣವಾಗಿದ್ದು ಬೆಲೆ ಇಳಿತ ದಿಂದಾಗಿ ರೈತರು ಕಂಗೆಟ್ಟಿದ್ದಾರೆ.

ಮಾರುಕಟ್ಟೆಯ ದೈನಿಕ ಬೆಲೆ ಮಾಹಿತಿಯಂತೆ 27/10/2022 ರಂದು ಹಳೆ ಅಡಿಕೆಗೆ ಕೆಜಿ ಒಂದಕ್ಕೆ ರೂ 562 ಇದ್ದರೆ ಹೊಸ ಅಡಿಕೆಗೆ 492 ಇತ್ತು .ನವೆಂಬರ್ 21 2022 ರಂದು ಸಿಂಗಲ್ ಚೋಲ್ ರೂ.475 ಹಾಗು ಡಬ್ಬಲ್ ಚೋಲ್ ಗೆ ರೂ. 550 ಇತ್ತು. ಜನವರಿ 16 2023 ರಂದು NS Rs 400 ,CS Rs 492 ,ಆದರೆ ಇವತ್ತು ಹೊಸ ಅಡಿಕೆಗೆ Rs 335 ,ಸಿಂಗಲ್ ಚೋಲ್ ಅಡಿಕೆಗೆ 405 , ಡಬ್ಬಲ್ ಚೋಲ್ ಅಡಿಕೆಗೆ rs 420 ಆಗಿದ್ದು 2022 ,2023 ರ ದರವನ್ನು 2024 ಕ್ಕೆ ಹೋಲಿಸಿದರೆ ಕೆಜಿ ಒಂದಕ್ಕೆ ರೂಪಾಯಿ 100/-ಕ್ಕಿಂತ ಹೆಚ್ಚು ಕಡಿಮೆಯಾಗಿರೋದು ಗಮನಾರ್ಹ. 10 ವರ್ಷಗಳ ಹಿಂದೆ ಕಾಂಗ್ರೆಸ್ ಸರಕಾರ ಇದ್ದಾಗ ಅಂತರ್ ರಾಷ್ಟ್ರೀಯ ವ್ಯಾಪಾರ ಮಾರುಕಟ್ಟೆ ಬಗ್ಗೆ ಟೀಕಿಸುತ್ತಿದ್ದ ಮಂದಿ ಇವತ್ತು ಹೋದ ದೇಶಗಳಲೆಲ್ಲ ಒಪ್ಪಂದ ವಹಿವಾಟಿಗೆ ಸಹಿಹಾಕಿ ಅಂತರ್ ರಾಷ್ಟ್ರೀಯ ಮಾರುಕಟ್ಟೆ ಅಭಿವೃದ್ದಿ ಆಗುತ್ತಿದೆ. ಇದರ ಪರಿಣಾಮ ವಿದೇಶದಿಂದ ಬೇಕಾಬಿಟ್ಟಿ ಅಡಿಕೆ ಅಮದು ಆಗುತ್ತಿದ್ದು ಜಿಲ್ಲೆಯ ಅಡಿಕೆ ಬೆಳೆಗಾರರು ಕಂಗಾಲಾಗಿದ್ದಾರೆ. ಈ ಬಗ್ಗೆ ಜಿಲ್ಲೆಯ ಯಾವೊಬ್ಬ ಜನಪ್ರತಿನಿಧಿ, ಸಂಸದರು ಅಡಿಕೆ ಅಮದು ನೀತಿ ವಿರುದ್ದ ಪ್ರತಿಭಟಿಸದೇ ಇರುವುದು ನಮ್ಮ ಜಿಲ್ಲೆಯ ಅಡಿಕೆ ಬೆಲೆಗಾರರ ದುರಂತ. ಆದ್ದರಿಂದ ಕೇಂದ್ರ ಸರಕಾರ, ಸಂಸದರು ಮತ್ತು ಕ್ಯಾಂಪ್ಕೋ ಸಂಸ್ಥೆಯ ನಿಲುವನ್ನು ಖಂಡಿಸುವುದಾಗಿ ಸುಳ್ಯ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ, ಕೆಪಿಸಿಸಿ ಮಾಜಿ ಕಾರ್ಯದರ್ಶಿ ಎಂ ವೆಂಕಪ್ಪ ಗೌಡ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.