ಸಂಜೆ ಸಮಾರೋಪ ಸಮಾರಂಭ
ವಾದ್ಯ ಸಂಗೀತ ಜುಗಲ್ ಬಂಧಿ, ಭಕ್ತಿರಸಮಂಜರಿ
ಸುಳ್ಯ ರಾಮ ಮಂದಿರದ ಬ್ರಹ್ಮಕಲಶೋತ್ಸವದ ಪ್ರಯುಕ್ತ ಇಂದು ಬೆಳಗ್ಗೆ ತಂತ್ರಿಯವರ ಮಾರ್ಗದರ್ಶನದಲ್ಲಿ ವೈದಿಕರಿಂದ ಲೋಕ ಕಲ್ಯಾಣಾರ್ಥವಾಗಿ ಚಂಡಿಕಾಯಾಗ ಹಾಗೂ ಲಕ್ಷ ತುಳಸಿ ಅರ್ಚನೆಯು ನಡೆಯಿತು. ಮಧ್ಯಾಹ್ನ ಮಹಾಪೂಜೆಯಾಗಿ ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ಯಾಗಲಿದೆ.
ಸಂಜೆ ಸಮಾರೋಪ ಸಮಾರಂಭವು ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಕೃಷ್ಣ ಕಾಮತ್ ಅಧ್ಯಕ್ಷತೆಯಲ್ಲಿ ನಡೆಯಲಿದ್ದು
ಬಳಿಕ ಸಾಂಸ್ಕೃತಿಕ ಕಾರ್ಯಕ್ರಮದ
ಪ್ರಯುಕ್ತ ಕೇರಳ ಮತ್ತು ಕರ್ನಾಟಕದ ಪ್ರಖ್ಯಾತ ಕಲಾವಿದರಿಂದ ಆಕರ್ಷಣೀಯ ವಾದ್ಯ ಸಂಗೀತ ಜುಗಲ್ ಬಂಧಿ ಮತ್ತು ಭಕ್ತಿ ಗೀತೆಗಳ ಗಾಯನ ಕಾರ್ಯಕ್ರಮ ನಡೆಯಲಿರುವುದು ಎಂದು ಸಮಿತಿ ಪ್ರಧಾನ ಕಾರ್ಯದರ್ಶಿ ನಾರಾಯಣ ಕೇಕಡ್ಕ ತಿಳಿಸಿರುತ್ತಾರೆ.