ಸುಳ್ಯ ರಾಮಮಂದಿರದ ಬ್ರಹ್ಮಕಲಶೋತ್ಸವದ ಪ್ರಯುಕ್ತ ಅದ್ದೂರಿಯ ಭಜನಾ ಮೆರವಣಿಗೆ-ಆಕರ್ಷಕ ನೃತ್ಯ ಭಜನೆ

0

ಸುಳ್ಯ ರಾಮ ಮಂದಿರದ ಬ್ರಹ್ಮಕಲಶೋತ್ಸವದ ಪ್ರಯುಕ್ತ ಫೆ. 26 ರಂದು ಸುಳ್ಯದ ಮುಖ್ಯ ರಸ್ತೆಯಲ್ಲಿ ತಾಲೂಕಿನ ವಿವಿಧ ಭಜನಾ ಮಂಡಳಿಯ ಸದಸ್ಯರು ‌ಆಕರ್ಷಕ ಕುಣಿತ ಭಜನೆಯೊಂದಿಗೆ ಮೆರವಣಿಗೆಯಲ್ಲಿ ಸಾಗಿದರು‌.
ಸಂಜೆ ಚೆನ್ನಕೇಶವ ದೇವಸ್ಥಾನದ ಎದುರು ಮೆರವಣಿಗೆಗೆ ಚಾಲನೆ ನೀಡಲಾಯಿತು. ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಕೃಷ್ಣ ಕಾಮತ್ , ಪ್ರಧಾನ ಕಾರ್ಯದರ್ಶಿ ನಾರಾಯಣ ಕೇಕಡ್ಕ
ಧರ್ಮದರ್ಶಿ ಮಂಡಳಿಯ ಸದಸ್ಯರು ಶುಭ ಹಾರೈಸಿದರು.

ಮೆರವಣಿಗೆಯಲ್ಲಿ ಭಾರತ ಮಾತೆಯ ಹಾಗೂ ಶ್ರೀ ರಾಮ ದೇವರ ಭಾವಚಿತ್ರ ಹೊತ್ತಿರುವ ರಥ ಹಾಗೂ ಕೇರಳದ ಆಕರ್ಷಕ ಸಿಂಗಾರಿ ಮೇಳ, ಪಾಣೆ ಮಂಗಳೂರಿನ ಬ್ಯಾಂಡ್ ಸೆಟ್ ವಾದನದೊಂದಿಗೆ ಭಜನಾ ಮೆರವಣಿಗೆಯು ಸಾಗಿತು.
ಮೆರವಣಿಗೆಯಲ್ಲಿ ಪುಟಾಣಿ ಮಕ್ಕಳ ದೀಪದ ಬೆಳಕು ಹಾಗೂ
ಮಹಿಳೆಯರ ಮತ್ತು ಮಕ್ಕಳ ಹಾಗೂ ಪುರುಷರ ಆಕರ್ಷಕ ನೃತ್ಯ ಭಜನೆಯು ಜನಮನಸೂರೆಗೊಂಡಿತು.
ಇಡೀ ಸುಳ್ಯ ನಗರದಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಯಿತು.


ಏಕಕಾಲದಲ್ಲಿ ನಾಲ್ಕು ಧ್ವನಿ ವರ್ದಕ ಅಳವಡಿಸಿದ ವಾಹನಗಳಲ್ಲಿ ಭಕ್ತಿ ಗೀತೆಯು ಮೊಳಗಿತು. ಸಹಸ್ರಾರು ರಾಮ ಭಕ್ತರು ಕಾಲ್ನಡಿಗೆಯಲ್ಲಿ ಸಾಗಿದರು.
ಮೆರವಣಿಗೆ ಚೆನ್ನಕೇಶವ ದೇವಸ್ಥಾನದಿಂದ ಹೊರಟುಗಾಂಧಿನಗರದವರೆಗೆ ಸಾಗಿ ಅಲ್ಲಿಂದ ಹಿಂತಿರುಗಿ ರಾಮ ಮಂದಿರದ ಬಳಿಯಲ್ಲಿ ಸಮಾಪನಗೊಂಡಿತು. ಅತ್ಯಂತ ಶಿಸ್ತು ಬದ್ದವಾಗಿ ವಾಹನ ಸಂಚಾರಕ್ಕೆ ಅಡಚಣೆಯಾಗದಂತೆ ಮೆರವಣಿಗೆಯು ನಡೆಯಿತು. ಸ್ವಯಂ ಸೇವಕರಾಗಿ ಸ್ಥಳೀಯ ಸಂಘಟನೆಯ ಕಾರ್ಯಕರ್ತರು,
ಬ್ರಹ್ಮಕಲಶೋತ್ಸವ ಸಮಿತಿ ‌ಪದಾಧಿಕಾರಿಗಳು ಹಾಗೂ ಉಪ ಸಮಿತಿಯ ಸಂಚಾಲಕರು ಮತ್ತು‌ ವಾರ್ಡ್ ವಾರು ಸದಸ್ಯರು ಸ್ವಯಂ ಸೇವಕರಾಗಿ ಮೆರವಣಿಗೆಯಲ್ಲಿ ಸಹಕರಿಸಿದರು. ಮೆರವಣಿಗೆ ಸಾಗಿ ಬರುವ ಸಂದರ್ಭದಲ್ಲಿ ನಗರದಲ್ಲಿ ವಿದ್ಯುತ್ ಪೂರೈಕೆ ಇಲ್ಲದೆ ಪೇಟೆಯಲ್ಲಿ ಕತ್ತಲು ಕವಿದಿತ್ತು.