ದೊಡ್ಡಣ್ಣ ಬರಮೇಲು, ಕೇಪು ಅಜಿಲರಿಗೆ ಕರ್ನಾಟಕ ಜಾನಪದ ಪರಿಷತ್ ಪ್ರಶಸ್ತಿ

0

ಮಾರ್ಚ್ 1ರಿಂದ 3 ರವರೆಗೆ ಮಂಗಳೂರಿನಲ್ಲಿ ನಡೆಯುವ ಜಾನಪದ ಕಡಲೋತ್ಸವ 2024 ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ತಾಲೂಕುಗಳಿಂದ 14 ಮಂದಿ ವಿವಿಧ ಕ್ಷೇತ್ರದ ಜನಪದ ಕಲಾವಿದರು. ದೈವ ನರ್ತಕರು, ಜನಪದ ಸಂಘಟಕರು ಹಾಗೂ ನಾಟಿ ವೈದ್ಯರುಗಳನ್ನು ಗುರುತಿಸಿ ಕರ್ನಾಟಕ ಜಾನಪದ ಪರಿಷತ್ ಪ್ರಸಸ್ತಿಯನ್ನು ಘೋಷಿಸಿದೆ.

ಮಾರ್ಚ್2 ಮತ್ತು 3 ರಂದು ಸಂಜೆ ನಡೆಯುವ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ಪುದಾನ ಮಾಡಲಾಗುವುದು. ಪ್ರಶಸ್ತಿಗೆ ಆಯ್ಕೆಯಾದವರು ಪಟ್ಟಿ ಈ ಕೆಳಗಿನಂತಿದೆ. ದೊಡ್ಡಣ್ಣ ಬರಮೇಲು ಸುಳ್ಯ ಜಾನಪದ ಕ್ರೀಡಾ ಸಂಘಟಕರು. ಶ್ರೀಮತಿ ಭವಾನಿ ಪೆರ್ಗಡೆ ತೊಕೆಮನ, ಎ ಕೇಪು ಅಜಿಲ ಸುಳ್ಯ ಜಾನಪದ ಕಲಾವಿದ, ಸದಾನಂದ ನಾರಾವಿ ಜಾನಪದ ಸಾಹಿತಿ, ಬೇಬಿ ಪೂಜಾರಿ ಪಿಲ್ಯ ಬೆಳ್ತಂಗಡಿ ನಾಟಿವೈದ್ಯರು, ಶ್ರೀಮತಿ ಕರ್ಗಿ ಶೆಡ್ರಿ, ಅಳದಂಗಡಿ, ಮೇರಿಜೋನ್ ಕಡಬ ಜಾನಪದ ಸಂಘಟಕಿ ಮತ್ತು ಕಲಾವಿದೆ. ಬೀಪಾತುಮ್ಮ ಆತೂರು ಕೊಯಿಲ ತುಳು ಬ್ಯಾರಿ ಜಾನಪದ ಕಲಾವಿದೆ ಮತ್ತು ನಾಟಿ ವೈದ್ಯರು, ಶ್ರೀಮತಿ ಅಪ್ಪಿ ಶೆಟ್ಟಿ ಕಿನ್ನಿಗೋಳಿ, ಕಿಟ್ಟ ಮಲೆಕುಡಿಯ ಜಾನಪದ ಕಲಾವಿದರು. ಮೈಮ್ ರಮೇಶ್ ಮಂಗಳೂರು, ಶ್ರೀಮತಿ ವೆಂಕಮ್ಮ ಈಶ್ವರ ಮಂಗಳ ನಾಟಿ ವೈದ್ಯ. ಕರಿಯ ಅಜಿಲ ಕಡ್ಯ ಪುತ್ತೂರು ದೈವ ನರ್ತಕ, ಉಗ್ರಪ್ಪ ಪೂಜಾರಿ
ಮೂಡಬಿದಿರಿ ಜನಪದ ಸಾಹಿತಿ ಮತ್ತು ಪಾಡ್ನನ ಕಲಾವಿದ ಮೊದಲಾದವರಿಗೆ ಪ್ರಶಸ್ತಿ ನೀಡಿ
ಗೌರವಿಸಲಾಗುವುದು.