ಕವಯತ್ರಿ ಪ್ರಿಯಾ ಸುಳ್ಯ ಅವರ ಕೃತಿ ” ಬಾಳಿಗೆ ಬೆಳಕು ” ಬಿಡುಗಡೆ

0

ಕನ್ನಡ ಸಾಹಿತ್ಯ ಪರಿಷತ್ತು ಪುತ್ತೂರು ತಾಲೂಕು ಘಟಕ, ರೋಟರಿ ಕ್ಲಬ್ ಪುತ್ತೂರು ಸ್ವರ್ಣ, ಚಿಗುರೆಲೆ ಸಾಹಿತ್ಯ ಬಳಗ ಪುತ್ತೂರು ಇದರ ಸಂಯುಕ್ತ ಆಶ್ರಯದಲ್ಲಿ ಪುತ್ತೂರಿನ ಮನಿಷಾ ಸಭಾಂಗಣದಲ್ಲಿ ಯುವ ಕವಯತ್ರಿ ಪ್ರಿಯಾ ಸುಳ್ಯರವರ ಬಾಳಿಗೆ ಬೆಳಕು ಕೃತಿ ಬಿಡುಗಡೆ ನಡೆಯಿತು.

ಸಮಾರಂಭವನ್ನು ದೀಪ ಪ್ರಜ್ವಲಿಸಿ ಮಾತನಾಡಿದ ನ್ಯಾಯವಾದಿ ಭಾಸ್ಕರ್ ಕೋಡಿಂಬಾಳ ಅವರು “ಸಾಹಿತ್ಯ ಎನ್ನುವುದು ನಮ್ಮನ್ನ ಬೆಸೆಯುವಂತದ್ದು, ಸಾಹಿತಿಗಳು ಬರೆದಂತೆ ನಡೆಯುವ ಗುಣ ಹೊಂದಿರುವವರಾಗಿದ್ದಲ್ಲಿ ಸ್ವಚ್ಛ ಸಮಾಜದ ನಿರ್ಮಾಣ ಸಾಧ್ಯ ಎಂದು ಕೃತಿಕಾರರಿಗೆ ಅಭಿನಂದಿಸಿದರು.

ವಿಶೇಷ ಆಹ್ವಾನಿತರಾಗಿ
ದೆಹಲಿ ಕರ್ನಾಟಕ ಸಂಘದ ಮಾಜಿ ಅಧ್ಯಕ್ಷರಾದ ವಸಂತ ಶೆಟ್ಟಿ ಬೆಳ್ಳಾರೆ ಅವರು ಮಾತನಾಡಿ ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಿರಿಯ ಕಿರಿಯ ಸಾಹಿತಿಗಳನ್ನು ಒಗ್ಗೂಡಿಸಿ ವಿನೂತನ ಕಾರ್ಯಕ್ರಮಗಳನ್ನು ಮಾಡುತ್ತಿರುವುದು ಅಭಿನಂದನೀಯ ಎನ್ನುತ್ತಾ ಕೃತಿಕಾರರಾದ ಪ್ರಿಯಾ ಸುಳ್ಯ ಅವರಿಗೆ ಅಭಿನಂದಿಸಿದರು.

ರಾಜಧಾನಿ ದೆಹಲಿಯಲ್ಲಿ ಕನ್ನಡ ಡಿಂಡಿಮವನ್ನು ಮೊಳಗಿಸಿದ ಹಾಗೂ ಕನ್ನಡ ಪರ ಸೇವೆಗಾಗಿ ವಸಂತಶೆಟ್ಟಿ ಬೆಳ್ಳಾರೆ ಅವರನ್ನು ಸನ್ಮಾನಿಸಲಾಯಿತು.

ವಿನೂತನ ರೀತಿಯಲ್ಲಿ ಕೃತಿ ಬಿಡುಗಡೆ

ಕ್ರಾಫ್ಟ್ ಮನೆಯ ಮಾದರಿಯನ್ನು ತಯಾರಿಸಿ ಅದರೊಳಗಿದ್ದ ಬ್ಯಾಟರಿ ಚಾಲಿತ ವಿದ್ಯುತ್ ದೀಪದ ಬಟನ್ ಅದುಮಿ ಬೆಳಕು ಚೆಲ್ಲಿ ಮನೆಯ ಒಳಗಿಂದ ಬಾಳಿಗೆ ಬೆಳಕು ಕೃತಿಯನ್ನು ಸೇರಿರುವ ಗಣ್ಯರ ಕೈಗೆ ಹಸ್ತಾಂತರ ಮಾಡುವ ಮೂಲಕ ವಿಶೇಷ ರೀತಿಯಲ್ಲಿ ಸ. ಉ. ಹಿ. ಪ್ರಾ. ಶಾಲೆ ಪಡ್ನೂರು ಇಲ್ಲಿನ 9ನೇ ತರಗತಿ ವಿದ್ಯಾರ್ಥಿನಿ ಕು. ಮಣಿ ಕೃತಿ ಲೋಕಾರ್ಪಣೆ ಮಾಡಿ ಶುಭ ಹಾರೈಸಿದರು.

ಕೃತಿ ಕಾರರಾದ ಪ್ರಿಯಾ ಸುಳ್ಯ ಎಲ್ಲರ ತನಗೆ ಸಹಕಾರ ನೀಡಿವರನ್ನು ಸ್ಮರಿಸುತ್ತಾ ತಮ್ಮ ಮನದಾಳದ ಮಾತುಗಳನ್ನಾಡಿದರು.

ಯುವ ಪ್ರತಿಭೆಗೆ ಗೌರವಾರ್ಪಣೆ

ಇತ್ತೀಚೆಗೆ ಶಾಂಭವಿ ವಿಜಯ ಯಕ್ಷಗಾನದಲ್ಲಿ ಶ್ರೀದೇವಿಯಾಗಿ ಮಿಂಚಿದ ಕುಮಾರಿ ಮೆಲಿಷಾ ಮಸ್ಕರೇನಸ್ ಅವರನ್ನು ಅಭಿನಂದಿಸಲಾಯಿತು.

ಸಮಾರಂಭದಲ್ಲಿ ರೋಟರಿ ಕ್ಲಬ್ ಪುತ್ತೂರು ಸ್ವರ್ಣ ಇದರ ಅಧ್ಯಕ್ಷರಾದ ಬಿ. ಸುಂದರ ರೈ, ,ಹಿರಿಯ ಸಾಹಿತಿಗಳಾದ ನಾರಾಯಣ ರೈ ಕುಕ್ಕುವಳ್ಳಿ, ಸಾಮಾಜಿಕ ಹೋರಾಟಗಾರರಾದ ಸುಭಾಷ್ ಎಸ್ ಬೆಂಗಳೂರು, ಚಿಗುರೆಲೆ ಸಾಹಿತ್ಯ ಬಳಗದ ಸ್ಥಾಪಕಾಧ್ಯಕ್ಷರಾದ ಚಂದ್ರಮೌಳಿ ಕಡಂದೇಲು ಶುಭ ಹಾರೈಸಿದರು. ಕೃತಿ ಕಾರರ ಪರಿಚಯವನ್ನು ಪತ್ರಕರ್ತರಾದ ರಾಜು ಬೆಂಗಳೂರು ಮಾಡಿದರು , ಕೃತಿ ಪರಿಚಯವನ್ನು ವಿಮರ್ಶಕರು ಮತ್ತು ಯುವ ಸಾಹಿತಿಗಳಾದ ವಿಂಧ್ಯಾ ಎಸ್ ರೈ ಮಾಡಿದರು. ಸಮಾರಂಭದ ಸಭಾಧ್ಯಕ್ಷತೆಯನ್ನು ಕನ್ನಡ ಸಾಹಿತ್ಯ ಪರಿಷತ್ತು ಪುತ್ತೂರು ತಾಲೂಕು ಘಟಕದ ಅಧ್ಯಕ್ಷರಾದ ಪುತ್ತೂರು ಉಮೇಶ್ ನಾಯಕ್ ವಹಿಸಿ ಸಂದರ್ಭೋಚಿತವಾಗಿ ಮಾತನಾಡಿದರು.

ಸಭಾ ಕಾರ್ಯಕ್ರಮದಲ್ಲಿ ದೇವರ ಸ್ತುತಿಗೈದ ಸ. ಹಿ. ಪ್ರಾ. ಶಾಲೆ ಚಿಕ್ಕಮುಡ್ನೂರು ಇಲ್ಲಿನ ವಿಶೇಷ ಚೇತನ ವಿದ್ಯಾರ್ಥಿನಿ ಕು. ಧನ್ಯಶ್ರೀ, ಕು. ಮಣಿ, ವಿಂಧ್ಯಾ ಎಸ್ ರೈ, ಸುಪ್ರೀತಾ ಚರಣ್ ಪಾಲಪ್ಪೆ, ಸುಭಾಷ್ ಎಸ್, ರಾಜು ಬೆಂಗಳೂರು,ಹಿರಿಯ ಸಾಹಿತಿ ನಾರಾಯಣ ರೈ ಕುಕ್ಕುವಳ್ಳಿ, ನಾರಾಯಣ ಕುಂಬ್ರ ಇವರಿಗೆ ಬಾಳಿಗೆ ಬೆಳಕು ಸವಿನೆನಪಿಗಾಗಿ ಕೃತಿಕಾರರಾದ ಪ್ರಿಯಾ ಸುಳ್ಯರವರು ಗೌರವಾರ್ಪಣೆ ಸಲ್ಲಿಸಿದರು.

ಕು. ಅಪೂರ್ವ ಕಾರಂತ್ ಸ್ವಾಗತಿಸಿ, ನಾರಾಯಣ ಕುಂಬ್ರ ಪ್ರಾಸ್ತಾವಿಕ ನುಡಿಗಳನ್ನಾಡಿದರು, ರಶ್ಮಿತಾ ಸುರೇಶ್ ಜೋಗಿಬೆಟ್ಟು ಕಾರ್ಯಕ್ರಮ ನಿರೂಪಿಸಿದರು. ರೋಟರಿ ಕ್ಲಬ್ ಪುತ್ತೂರು ಸ್ವರ್ಣ ಇದರ ನಿಯೋಜಿತ ಅಧ್ಯಕ್ಷರಾದ ಸುರೇಶ್ ಪಿ ವಂದಿಸಿದರು.

ನಂತರ ನಡೆದ ಬಾಳಿಗೆ ಬೆಳಕು ಕವನಕೆ ಹೊಳಪು ಕವಿಗೋಷ್ಠಿ ಸ. ಪ. ಪೂ. ಕಾಲೇಜು ಕೊಣಾಲು ಇಲ್ಲಿನ ಉಪನ್ಯಾಸಕರು ಮತ್ತು ಯುವ ಸಾಹಿತಿಗಳಾದ ಸುಪ್ರೀತಾ ಚರಣ್ ಪಾಲಪ್ಪೆ ಕಡಬ ಇವರ ಅಧ್ಯಕ್ಷತೆಯಲ್ಲಿ ನಡೆಯಿತು. ಕವಿಗೋಷ್ಠಿಯಲ್ಲಿ ಬಾಳಿಗೆ ಬೆಳಕು ಕೃತಿಯಿಂದ ಮಲ್ಲಿಕಾ ಜೆ ರೈ, ಜಯಾನಂದ ಪೆರಾಜೆ, ರಮೇಶ್ ಮೆಲ್ಕಾರ್, ರಾಮಣ್ಣ ರೈ, ಪಿ. ಎನ್. ಕೃಷ್ಣ ಭಟ್, ಪರಮೇಶ್ವರಿ ಪ್ರಸಾದ್, ಚಂದ್ರಹಾಸ ಬಂದಾರು, ಸುರೇಶ ಚಾರ್ವಾಕ, ನ್ಯಾನ್ಸಿ ನೆಲ್ಯಾಡಿ, ಶಿರ್ಷಿತಾ ಕಾರಂತ್, ಜಯರಾಮ್ ಪಡ್ರೆ, ಧನ್ವಿತಾ ಕಾರಂತ್, ಶ್ರೀಕಲಾ ಕಾರಂತ್ ಅಳಿಕೆ, ಶಾಂತ ಪುತ್ತೂರು,ಯಶೋಧ ಬಲ್ನಾಡ್, ಕವಿತಾ ಸತೀಶ್, ಮಂಜುಶ್ರೀ ನಲ್ಕ, ನಯನ ಅಲಿಮರ,ಶೈಲಜಾ ಕೇಕಣಾಜೆ,ಪ್ರೇಮ ಎ. ಸುಳ್ಯ,ವ. ಉಮೇಶ್ ಕಾರಂತ್ ಮಂಗಳೂರು, ವಿರಾಜ್ ಅಡೂರು,ಅನಿತಾ ಶೆಣೈ ಮಂಗಳೂರು, ರವಿ ಪಾಂಬಾರು,ಅಪೂರ್ವ ಕಾರಂತ್ ಇವರೆಲ್ಲ ವಿವಿಧ ಕವನಗಳಿಗೆ ದನಿಯಾದರು.

ಕವಿಗೋಷ್ಠಿ ನಿರ್ವಹಣೆಯನ್ನು ಸೌಮ್ಯರಾಮ್ ಕಲ್ಲಡ್ಕ ಹಾಗು ಸೌಜನ್ಯ ಬಿ. ಎಂ. ನಿರ್ವಹಿಸಿದರು.