ಸುನಾದ ಸಂಗೀತ ಕಲಾ ಶಾಲೆಯ ಕಲ್ಲುಗುಂಡಿ, ಅಡ್ಕಾರು, ಸುಳ್ಯ ಮತ್ತು ಐವರ್ನಾಡು ಶಾಖೆಗಳ ವತಿಯಿಂದ ಸುನಾದ ಸಂಗೀತೋತ್ಸವ ೨೦೨೪ ಐವರ್ನಾಡು ಪಂಚಲಿಂಗೇಶ್ವರ ದೇವಸ್ಥಾನದ ಸಭಾಭವನದಲ್ಲಿ ಫೆ.೨೫ರಂದು ನಡೆಯಿತು. ಸಂಗೀತ ಸಂಭ್ರಮಕ್ಕೆ ಸಂಸ್ಥೆಯ ಸಂಗೀತ ಗುರುಗಳಾದ ಮಹಾಬಲೇಶ್ವರ ಬಿರ್ಮುಕಜೆಯವರು ದೀಪ ಬೆಳಗುವ ಮೂಲಕ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ರವಿರಾಜ್ ಅಡ್ಕಾರ್ ಹಾಗೂ ಪೋಷಕರಾದ ಅನಂತ ಖಂಡಿಗೆಮೂಲೆ ಉಪಸ್ಥಿತರಿದ್ದರು.
ಸಂಗೀತ ಸಂಭ್ರಮದಲ್ಲಿ ಗುರು ವಂದನೆ ಮತ್ತು ಸುನಾದ ಸಂಗೀತ ಕಲಾ ಶಾಲಾ ವಿದ್ಯಾರ್ಥಿಗಳಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯನ `ಸುನಾದ ಸಂಗೀತೋತ್ಸವ’ ನಡಯಿತು.
ಸಂಜೆ ೫.೩೦ರಿಂದ ವಿದ್ವಾನ್ ವಿವೇಕ್ ಮೂಝಿಕ್ಕುಳಂ ಹಾಗೂ ಬಳಗದವರಿಂದ ಶಾಸ್ತ್ರೀಯ ಸಂಗೀತ ಕಛೇರಿ ನಡೆಯಿತು. ವಯಲಿನ್ ವಾದಕರಾಗಿ ವಿದ್ವಾನ್ ಮತ್ತೂರು ಶ್ರೀನಿಧಿ, ಮೃದಂಗ ವಾದಕರಾಗಿ ವಿದ್ವಾನ್ ಕಾಂಚನ ಎ. ಈಶ್ವರ ಭಟ್, ಘಟಂ ವಾದಕರಾಗಿ ವಿದ್ವಾನ್ ಶರತ್ ಕೌಶಿಕ್‌ರವರು ಸಹಕರಿಸಿದರು. ಸಂಸ್ಥೆಯ
ವಿದ್ಯಾರ್ಥಿಗಳು ಹಾಗೂ ಪೋಷಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.