ಕೆ.ವಿ.ಜಿ. ಇಂಜಿನಿಯರಿಂಗ್ ಕಾಲೇಜಿನಲ್ಲಿ ಕಂಪ್ಯೂಟರ್ ಸೈನ್ಸ್ ವಿಭಾಗದ ವಿದ್ಯಾರ್ಥಿ ಸಂಘ

0

ಪದಾಧಿಕಾರಿಗಳ ಪದಗ್ರಹಣ ಮತ್ತು ಪ್ರೆಶರ್‍ಸ್‌ಡೇ ಆಚರಣೆ

ತಂತ್ರಜ್ಞಾನದ ಕಲಿಕೆ ಮತ್ತು ಬಳಕೆಯಿಂದ ವಿದ್ಯಾರ್ಥಿಗಳ ಜ್ಞಾನದ ಗುಣಮಟ್ಟ ವೃದ್ಧಿ : ಡಾ. ಉಜ್ವಲ್ ಯು.ಜೆ.

ಕೆ.ವಿ.ಜಿ. ತಾಂತ್ರಿಕ ಮಹಾವಿದ್ಯಾಲಯದ ಕಂಪ್ಯೂಟರ್ ಸೈನ್ಸ್ ಮತ್ತು ಇಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿ ಸಂಘ-ಸೆನ್ಸಾದ ಉದ್ಘಾಟಣಾ ಸಮಾರಂಭ ಸ್ವಾಗತ ಕಾರ್ಯಕ್ರಮ ಬಾಂಧವ್ಯವು ಕಾಲೇಜಿನ ಸಭಾಂಗಣದಲ್ಲಿ ಜರುಗಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಸಮಾರಂಭದ ಮುಖ್ಯ ಅತಿಥಿಗಳಾದ ಡಾ. ಬಸಪ್ಪ ಬಿ. ಕೊಡಡ, ಮುಖ್ಯಸ್ಥರು, ಎ.ಐ.ಎಮ್.ಎಲ್ ವಿಭಾಗ, ಕೆನರಾ ಇಂಜಿನಿಯರಿಂಗ್ ಕಾಲೇಜು, ಬೆಂಜನಪದವು, ಮಂಗಳೂರು ನೆರವೇರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು ವಿದ್ಯಾರ್ಥಿಗಳು ಆಧುನಿಕ ತಂತ್ರಜ್ಞಾಗಳನ್ನು ಕಲಿಯುವುದರೊಂದಿಗೆ ಪ್ರಸಕ್ತ ಸಮಾಜದಲ್ಲಿ ತಮ್ಮ ಸಾಮರ್ಥ್ಯವನ್ನು ಅರಿತು ಅಸಾಧ್ಯವನ್ನು ಸಾಧಿಸುವಲ್ಲಿ ಮುನ್ನಡೆಯಬೇಕೆಂದು ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಕಾಲೇಜಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಹಾಗೂ ವಿಟಿಯುನ ಎಕ್ಸೆಕ್ಯುಟಿವ್ ಕೌನ್ಸಿಲ್ ಸದಸ್ಯರು ಹಾಗೂ ವಿಭಾಗದ ಮುಖ್ಯಸ್ಥರಾದ ಡಾ. ಉಜ್ವಲ್ ಯು.ಜೆ. ಯವರು ಮಾತನಾಡಿ ಸೆನ್ಸಾ ವೇದಿಕೆಯು ವಿದ್ಯಾರ್ಥಿಗಳನ್ನು ನೂತನ ತಂತ್ರಜ್ಞಾನಗಳ ಕಲಿಯುವಿಕೆಗೆ ಉತ್ತೇಜನ ನೀಡುತ್ತಿದ್ದು ವಿದ್ಯಾರ್ಥಿಗಳು ಅದನ್ನು ಸದುಪಯೋಗಪಡಿಸಿಕೊಳ್ಳಬೇಕು ಹಾಗೂ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್‌ನ ಮಹತ್ವ ಮತ್ತು ಉಪಯೋಗಗಳು ಹಾಗೂ ಉದ್ಯೋಗಾವಕಾಶಗಳ ಬಗ್ಗೆ ವಿದ್ಯಾರ್ಥಿಗಳು ಅರಿತುಕೊಂಡು ಹೆಚ್ಚಿನ ಸಾಧನೆ ಮಾಡಬೇಕೆಂದು ಶುಭ ಹಾರೈಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಪ್ರಾಂಶುಪಾಲರಾದ ಡಾ. ಸುರೇಶ ವಿ. ಯವರು ವಹಿಸಿದ್ದು ಕಾರ್ಯಕ್ರಮಕ್ಕೆ ಯಶಸ್ಸನ್ನು ಹಾರೈಸಿದರು. ಮುಖ್ಯ ಅತಿಥಿಗಳಾದ ಡಾ. ಬಸಪ್ಪ ಬಿ. ಕೊಡಡ ಅವರು “Addressing Societal Needs and Challenges through Technological Solutions”ವಿಷಯದ ಕುರಿತು ತಾಂತ್ರಿಕ ಉಪನ್ಯಾಸ ನೀಡಿದರು.

ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ಪ್ರಹ್ಲಾದ್ ನಡ್ಕ ಸ್ವಾಗತಿಸಿ, ಜತೆಕಾರ್ಯದರ್ಶಿ ವಿಲ್ಮ ದೇಚಮ್ಮ ವಾರ್ಷಿಕ ವರದಿಯನ್ನು ಓದಿದರು. ತಾಂತ್ರಿಕ ಜತೆಕಾರ್ಯದರ್ಶಿ ಲಿಪ್ತಿ ವಂದಿಸಿದರು. ಸಂಯೋಜಕರಾದ ಪ್ರೊ. ಕಿಶೋರ್ ಕುಮಾರ್ ಕೆ., ಪ್ರೊ. ವೆಂಕಟೇಶ್ ಯು.ಸಿ. ಹಾಗೂ ಕೋಶಾಧಿಕಾರಿ ಡಾ. ಸವಿತಾ ಸಿ.ಕೆ., ಸೆನ್ಸಾ ಸಲಹೆಗಾರರಾದ ಡಾ. ಪ್ರಜ್ಞ ಎಂ.ಆರ್ ಹಾಗೂ ಪ್ರೊ. ಬಾಲಪ್ರದೀಪ್ ಕೆ.ಎನ್, ವಿಭಾಗದ ಎಲ್ಲಾ ಉಪನ್ಯಾಸಕರು ಹಾಗು ಸಿಬ್ಬಂಧಿ ವರ್ಗದವರು ಉಪಸ್ಥಿತರಿದ್ದರು. ಅಂತಿಮ ವರ್ಷದ ವಿದ್ಯಾರ್ಥಿಗಳಾದ ಕಾರ್ತಿಕ್ ಮತ್ತು ಅನನ್ಯ ಹೆಬ್ಬಾರ್ ಕಾರ್ಯಕ್ರಮವನ್ನು ನಿರೂಪಿಸಿದರು.