ಗುತ್ತಿಗಾರು: ವೈಭವದಿಂದ ನಡೆದ ಶ್ರೀ ಮುತ್ತಪ್ಪ ತಿರುವಪ್ಪ ದೈವದ ನೇಮೋತ್ಸವ

0

ಗುತ್ತಿಗಾರಿನ ಮುತ್ತಪ್ಪನಗರದ ಶ್ರೀ ಮುತ್ತಪ್ಪ ತಿರುವಪ್ಪ ದೈವದ ನೇಮೋತ್ಸವ ಮಾ.5 ಮತ್ತು 6 ರಂದು ವೈಭವದಿಂದ ನಡೆಯಿತು.

ಮಾ. 05 ರಂದು ಬೆಳಿಗ್ಗೆ ಶ್ರೀ ಗಣಪತಿ ಹವನ, ಸಂಜೆ ಶ್ರೀ ದೈವಕ್ಕೆ ಪೈಂಗುತ್ತಿ, ಶ್ರೀ ಮುತ್ತಪ್ಪ ದೈವದ ನೇಮ ನಡೆದು ನಂತರ ಸೇವೆಗಳ ಪ್ರಸಾದ ವಿತರಣೆ ಬಳಿಕ ಅನ್ನ ಸಂತರ್ಪಣೆ ನಡೆಯಿತು.
ಶ್ರೀ ಮುತ್ತಪ್ಪ ದೈವದ ಪೂರ್ವಜನ್ಮದ ಕಳಿಕ್ಕಾಪಾಟ್ ನಡೆದು, ರಾತ್ರಿ ಗಂಟೆ ಸಸಿಹಿತ್ತು ಮೇಳದವರಿಂದ “ಬೊಳ್ಳಿ ತೊಟ್ಟಿಲ್” ಎಂಬ ಹಾಸ್ಯಮಯ ತುಳು ಕಥಾನಕ ನಡೆಯಿತು.
ಮಾ.06 ರ ಬೆಳಗ್ಗೆ
ಶ್ರೀ ಮುತ್ತಪ್ಪ ತಿರುವಪ್ಪ ದೈವದ ನೇಮ ನಡೆದು, ಪ್ರಸಾದ ವಿತರಣೆ, ಪೈಂಗುತ್ತಿ ವೆಳ್ಳಾಟಂ ನಡೆಯಿತು. ಆಡಳಿತ ಮೊಕ್ತೇಸರ ವೆಂಕಟ್ ವಳಲಂಬೆ, ಕಾರ್ಯದರ್ಶಿ ಮರಿಯಪ್ಪ ಮಾವಾಜಿ, ಪ್ರಧಾನ ಅರ್ಚಕ ಮೋಹನ್ ಕಡ್ತಲ್ ಕಜೆ, ಮುಕ್ತೇಸರರಗಳಾದ ಚಂದ್ರಶೇಖರ ಕಂದಡ್ಕ, ದಯಾನಂದ ಮುತ್ಲಾಜೆ, ಭವಾನಿ ಶಂಕರ ಅಡ್ಡನಪಾರೆ, ಚಂದ್ರಶೇಖರ ಪಾರಪ್ಪಾಡಿ, ಎ.ಬಿ ಮಾಧವ ಅಡ್ಕದಮನೆ, ಅನಿಲ್ ಕುಮಾರ್, ಅಚ್ಯುತ ಗುತ್ತಿಗಾರು, ಡಿ .ಆರ್ ಲೋಕೇಶ್ವರ, ವಿನ್ಯಾಸ್ ಕೊಚ್ಚಿ, ಕಿಶೋರ್ ಕುಮಾರ್ ಬೊಮ್ಮದೇರೆ ಹಾಗೂ ವಿವಿಧ ಸಮಿತಿಗಳ ಪದಾಧಿಕಾರಿಗಳು ಕಾರ್ಯಕ್ರಮ ಯಶಸ್ವಿಗೆ ದುಡಿದರು.