ಬೆಳ್ಳಾರೆ ವಾಲ್ಮೀಕಿ ಅಟೋರಿಕ್ಷಾ ತಂಗುದಾಣ ಸಂಸದರಿಂದ ಉದ್ಘಾಟನೆ, ತಡಗಜೆ ರಸ್ತೆಗೆ ಶಾಸಕರಿಂದ ಗುದ್ದಲಿ ಪೂಜೆ

0

ಸಂಸದರ 2023-24ನೇ ಸಾಲಿನ ಸರಕಾರಿ ಪ್ರದೇಶಾಭಿವೃದ್ಧಿ ಅನುದಾನ ರೂ. 5ಲಕ್ಷ ವೆಚ್ಚದಲ್ಲಿ ಬೆಳ್ಳಾರೆ ಮೇಲಿನ ಪೇಟೆಯಲ್ಲಿ ನೂತನವಾಗಿ ನಿರ್ಮಾಣಗೊಂಡ ವಾಲ್ಮೀಕಿ ಅಟೋರಿಕ್ಷಾ ತಂಗುದಾಣವನ್ನು ಸಂಸದ ನಳಿನ್ ಕುಮಾರ್ ಕಟೀಲ್ ಮಾ. 8ರಂದು‌ ಉದ್ಘಾಟಿಸಿದರು. ಶಾಸಕರ ರೂ 20 ಲಕ್ಷ ಅನುದಾನದ ಮೂಲಕ ಅಭಿವೃದ್ಧಿಗೊಳ್ಳಲಿರುವ ಬೆಳ್ಳಾರೆ ತಡಗಜೆ ರಸ್ತೆಗೆ ಗುದ್ದಲಿಪೂಜೆಯನ್ನು ಶಾಸಕಿ ಕು. ಭಾಗೀರಥಿ ಮುರುಳ್ಯ ಇದೇ ಸಂದರ್ಭದಲ್ಲಿ ನೆರವೇರಿಸಿದರು.


ಬಳಿಕ ಬೆಳ್ಳಾರೆ ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ಸುನಿತಾ ಎಲ್.ರೈಯವರ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ನಡೆಯಿತು. ಬಿಜೆಪಿ ಸುಳ್ಯ ಮಂಡಲಾಧ್ಯಕ್ಷ ವೆಂಕಟ್ ವಳಲಂಬೆ, ಡಿಸಿಸಿ ಬ್ಯಾಂಕ್ ನಿರ್ದೇಶಕ ಎಸ್.ಎನ್. ಮನ್ಮಥ, ಬೆಳ್ಳಾರೆ ಗ್ರಾ.ಪಂ. ಉಪಾಧ್ಯಕ್ಷೆ ಶ್ರೀಮತಿ ವೀಣಾ ಮೂಡಾಯಿತೋಟ, ಸದಸ್ಯರಾದ ಅನಿಲ್ ರೈ ಚಾವಡಿಬಾಗಿಲು, ವಿಠಲ್ ದಾಸ್ ಎನ್.ಎಸ್.ಡಿ, ಶ್ರೀಮತಿ ಜಯಶ್ರೀ, ಕಾಮಗಾರಿಯ ಗುತ್ತಿಗೆದಾರ ಮಾಧವ ಮಾವ ವೇದಿಕೆಯಲ್ಲಿ ಉಪಸ್ಥಿತರಿದ್ದರು. ರಿಕ್ಷಾ ತಂಗುದಾಣಕ್ಕೆ ಅನುದಾನ ಒದಗಿಸಿದ ಸಂಸದ ನಳಿನ್ ಕುಮಾರ್ ಕಟೀಲ್ ಮತ್ತು ರಸ್ತೆ ಅಭಿವೃದ್ಧಿಗೆ ಅನುದಾನ ಒದಗಿಸಿದ ಕು. ಭಾಗೀರಥಿ ಮುರುಳ್ಯರನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು.

ಬೆಳ್ಳಾರೆ ಬಸ್ ನಿಲ್ದಾಣದ ಶೌಚಾಲಯವನ್ನು ಸುಚಿತ್ವ ಮಾಡುವ ಕೊರಗಪ್ಪ ಪಾಟಾಜೆ, ಅಟೋರಿಕ್ಷಾ ಹಿರಿಯ ಮಾಲಕ, ಚಾಲಕರಾದ ಸೀತಾರಾಮ ಶೆಟ್ಟಿಗಾರ್ ಮತ್ತು ಅನುದಾನವನ್ನು ತರಿಸುವಲ್ಲಿ ಶ್ರಮಿಸಿದ ಆಟೋ ಮಾಲಕ ಚಾಲಕ ಸಚಿನ್ ರೈ ಪೂವಾಜೆಯವರನ್ನು ಸಂಸದರು‌ ಸನ್ಮಾನಿಸಿದರು. ಶ್ರೀಮತಿ ಅಶ್ಬಿನಿ ಮತ್ತು ಕು. ಯಶಸ್ವಿ ಪ್ರಾರ್ಥಿಸಿದರು. ಪ್ರದೀಪ್ ಕುಮಾರ್ ರೈ ಪನ್ನೆ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಅಟೋರಿಕ್ಷಾ ಮಾಲಕ ಭಾಸ್ಕರ ನೆಟ್ಟಾರು ವಂದಿಸಿದರು. ತಂಗುದಾಣದ ರಿಕ್ಷಾ ಮಾಲಕ ಚಾಲಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.