ಪಂಚ ಗ್ಯಾರಂಟಿಗಳು ನಿಜವಾದ ಜಾತ್ಯಾತೀತ ಕಾರ್ಯಕ್ರಮ

0

ದೊಡ್ಡೋರ ಸಾಲ ಮನ್ನಾ ಮಾಡ್ತೀರಿ; ಬಡವರಿಗಾಗಿ ನಾವು ಯೋಜನೆ ಅನುಷ್ಠಾನ ಮಾಡಿದ್ರೆ ಯಾಕೆ ಹೊಟ್ಟೆ ಉರಿ?

ಬಿಜೆಪಿ ಶಾಸಕರಿಗೆ ಇಲ್ಲಿ ಬಂದ್ರೆ ಮುಜುಗರ ಆಗ್ತದೆ; ಅದಕ್ಕೇ ಬಂದಿಲ್ಲ

ಗ್ಯಾರಂಟಿ ಸಮಾವೇಶದಲ್ಲಿ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್

ಪಂಚ ಗ್ಯಾರಂಟಿಗಳು ನಿಜವಾದ ಜಾತ್ಯತೀತ ಯೋಜನೆ. ಜನರ ಬದುಕನ್ನು ಬದಲಾಯಿಸಿದ ಯೋಜನೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ಸುಳ್ಯದಲ್ಲಿ ಗ್ಯಾರಂಟಿ ಯೋಜನೆ ಫಲಾನುಭವಿಗಳ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಚುನಾವಣೆಗೆ ಮೊದಲು ಓಟಿಗೋಸ್ಕರ ಬುರುಡೆ ಬಿಡ್ತಾರೆ ಅಂತ ಬಿಜೆಪಿಯವರು ಹೇಳ್ತಾ ಇದ್ರು. ಅಧಿಕಾರಕ್ಕೆ ಬಂದ ಬಳಿಕ ಯಾವಾಗ ಮಾಡ್ತೀರಿ ಅಂತ ಪ್ರಶ್ನೆ ಮಾಡಲು ತೊಡಗಿದ್ರು.
ನುಡಿದಂತೆ ನಡೆದ ನಮ್ಮ ಸರಕಾರ ದೇಶದ ಇತಿಹಾಸದಲ್ಲೇ , ಜನರಿಗೆ ನೇರವಾಗಿ ಮುಟ್ಟುವ ದೊಡ್ಡ ಕಾರ್ಯಕ್ರಮ ಅನುಷ್ಠಾನಕ್ಕೆ ತಂದ ಸಾಧನೆ ಕಾಂಗ್ರೆಸ್ ಸರಕಾರದ್ದು ಎಂದು ಅವರು ಹೇಳಿದರು.

ನಮ್ಮ ಸರಕಾರಕ್ಕೆ ಹೃದಯ ಶ್ರೀಮಂತಿಕೆ ಇತ್ತು. ಹಾಗಾಗಿ ಬಡವರಿಗಾಗಿ ಕಾರ್ಯಕ್ರಮ ಅನುಷ್ಠಾನಕ್ಕೆ ತಂದೆವು. ಇದಕ್ಕೆ ಸಹಕಾರ ಮಾಡೋದು ಬಿಟ್ಟು, ಟೀಕೆ ಮಾಡೋದು ಸರಿಯಾ ತಪ್ಪಾ ಎಂದು ನೀವು ಕೇಳಬೇಕು ಎಂದು ಸಚಿವರು ಹೇಳಿದರು.

ಹತ್ತು ವರ್ಷದಲ್ಲಿ ಮೋದಿ ಅದೆಷ್ಟು ಶ್ರೀಮಂತರ ಸಾಲ ಮನ್ನಾ ಮಾಡಿಲ್ಲ? ನಾವು ಬಡವರಿಗೆ ಕೊಡ್ತೇವೆ ಅಂದ್ರೆ ನಿಮಗ್ಯಾಕೆ ಹೊಟ್ಟೆ ಉರಿ?
ಯಾಕೆ ಬಿಜೆಪಿ ಶಾಸಕರು ಕಾರ್ಯಕ್ರಮಕ್ಕೆ ಅಟೆಂಡ್ ಆಗ್ತಾ ಇಲ್ಲ. ಇಲ್ಲಿ ಬಂದು ಅವರಿಗೆ ಟೀಕೆ ಮಾಡ್ಲಿಕ್ಕೆ ಆಗೋದಿಲ್ಲ. ಬಂದ್ರೆ ಹೊಗಳ್ಬೇಕು. ಅವರಿಗೆ ಮುಜುಗರ ಆಗ್ತದೆ. ಅದಕ್ಕಾಗಿಯೇ ಬರ್ತಾ ಇಲ್ಲ
ಎಂದು ದಿನೇಶ್ ಗುಂಡೂರಾವ್ ಹೇಳಿದರು.