ಜಯನಗರದಲ್ಲಿ ವಿಶ್ವ ಮಹಿಳಾ ದಿನಾಚರಣೆ, ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಮಹಿಳೆಯರಿಗೆ ಸನ್ಮಾನ

0

ಮಹಿಳೆಯರು ಸಮಾಜದಲ್ಲಿ ಪ್ರೇರಣಾ ಶಕ್ತಿಗಳಾಗಿದ್ದಾರೆ: ಶಾಸಕಿ ಭಾಗೀರಥಿ ಮುರುಳ್ಯ

ಮಹಿಳೆಯರು ಸಮಾಜಕ್ಕೆ ಪ್ರೇರಣಾ ಶಕ್ತಿಗಳಾಗಿದ್ದಾರೆ.ಆಟೋ ಚಾಲನೆಯಿಂದ ಹಿಡಿದು ವಿಮಾನಗಳ ಹಾರಾಟದವರೆಗೂ ಇಂದು ಮಹಿಳೆಯರು ತನ್ನನ್ನು ತಾನು ಗುರುತಿಸಿಕೊಂಡಿದ್ದಾರೆ ಎಂದು ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿ ಕುಮಾರಿ ಭಾಗೀರಥಿ ಮುರುಳ್ಯ ಮಾರ್ಚ್ 10 ರಂದು ಜಯನಗರ ಶಾಲಾ ಮೈದಾನದಲ್ಲಿ ನಡೆದ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು.


ಈ ಸಂದರ್ಭದಲ್ಲಿ ಮಾತನಾಡಿದ ಅವರು ಇಂದು ಮಹಿಳೆಯರು ಮಹಿಳಾ ವಿಶ್ವ ದಿನಾಚರಣೆಯ ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಮುಖ್ಯ ಕಾರಣವೇ ಅವರ ಛಲ ಮತ್ತು ವಿಶ್ವಾಸ ಭರಿತ ಜೀವನ ಶೈಲಿಯಿಂದ ಆಗಿದೆ. ಇಂದು ಮಹಿಳೆಯರು ಪ್ರತಿಯೊಂದು ಕ್ಷೇತ್ರಗಳಲ್ಲಿಯೂ ಸಂಘಟಿತರಾಗಿ ತನ್ನನ್ನು ತಾನು ತೊಡಗಿಸಿಕೊಂಡು ಸಾಧನೆಗಳ ಮೂಲಕ ಉತ್ತಮ ಸಮಾಜವನ್ನು ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.ತನ್ನ ಜೀವದಿಂದ ಮತ್ತೊಂದು ಜೀವವನ್ನು ಕೊಡುವ ಮೂಲಕ ಅದರ ಹಾರೈಕೆ ಮತ್ತು ಬೆಳವಣಿಗೆಯಲ್ಲಿಯೂ ಕೂಡ ತನ್ನ ಸಂಪೂರ್ಣ ಶಕ್ತಿಯನ್ನು ನೀಡುವ ಕಾರ್ಯವನ್ನು ಒಂದು ಹೆಣ್ಣಿಗೆ ಮಾತ್ರ ಕೊಡಲು ಸಾಧ್ಯ ಎಂದು ಮಹಿಳೆಯರ ತ್ಯಾಗದ ಕುರಿತು ಮಾತನಾಡಿ ಹೇಳಿದರು.

ಸುಳ್ಯ ತಾಲೂಕು ಮಹಿಳಾ ಮಂಡಲಗಳ ಒಕ್ಕೂಟ ರಿ. ಮತ್ತು ಮೈತ್ರಿ ಮಹಿಳಾ ಮಂಡಲ ಜಯನಗರ ಸುಳ್ಯ ರಿ.ಇವುಗಳ ಜಂಟಿ ಆಶ್ರಯದಲ್ಲಿ ನಡೆದ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು
ಸುಳ್ಯ ಮಹಿಳಾ ಮಂಡಲಗಳ ಒಕ್ಕೂಟದ ಅಧ್ಯಕ್ಷೆ ಮಧುಮತಿ ಶೆಟ್ಟಿ ಬೊಳ್ಳೂರು ವಹಿಸಿದ್ದರು.


ವೇದಿಕೆಯಲ್ಲಿ ಜಯನಗರ ಮೈತ್ರಿ ಮಹಿಳಾ ಮಂಡಲ ಅಧ್ಯಕ್ಷೆ ಶ್ರೀಮತಿ ಶಿಲ್ಪಾ ಸುದೇವ್, ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ ಇದರ ಕಾರ್ಯದರ್ಶಿ ಡಾ. ಐಶ್ವರ್ಯಾ ಕೆ ಸಿ,ಜಯನಗರ ಶಾಲಾ ಮುಖ್ಯೋಪಾಧ್ಯಾಯನಿ ಶ್ರೀಮತಿ ವೀಣಾ ಕೆ, ತಾಲೂಕು ಮಹಿಳಾ ಮಂಡಲ ಮಾಜಿ ಅಧ್ಯಕ್ಷರಾದ ಶ್ರೀಮತಿ ಸುಮಾ ಸುಬ್ಬರಾವ್,ನ ಪಂ ಸದಸ್ಯೆ ಶಶಿಕಲಾ ನೀರಬಿದ್ರೆ,ತಾಲೂಕು ಮಹಿಳಾ ಮಂಡಲಗಳ ಒಕ್ಕೂಟದ ಗೌರವಾಧ್ಯಕ್ಷೆ ಶ್ರೀಮತಿ ತ್ರಿವೇಣಿ ದಾಮ್ಲೆ, ಉಪಾಧ್ಯಕ್ಷ ಶ್ರೀಮತಿ ಪುಷ್ಪಾ ಡಿ, ಕಾರ್ಯದರ್ಶಿ ಅಮಿತಾ ಸುತ್ತುಕೋಟೆ, ಕೋಶಾಧಿಕಾರಿ ಚಂದ್ರಾಕ್ಷಿ ಜೆ ರೈ, ಸದಸ್ಯರುಗಳಾದ ಲಲಿತಾ ಬೆಟ್ಟಂಪಾಡಿ, ಚಂದ್ರಕಲಾ ಕುತ್ತಮೊಟ್ಟೆ, ಲಲಿತಾ ಶಾಂತಿನಗರ, ಜಯನಗರ ಮೈತ್ರಿ ಮಹಿಳಾ ಮಂಡಲದ ಕಾರ್ಯದರ್ಶಿ ಸುಮತಿ ಕೆ ನಾಯಕ್, ಖಜಾಂಗಿ ಲಾವಣ್ಯ ಬಿ, ಸದಸ್ಯರಾದ ಜಯಾ ಗಿರೀಶ್, ಜೂಲಿಯಾನ ಆರ್ ಕ್ರಾಸ್ತಾ, ನಾಗವೇಣಿ ಕೆ, ಜಯಶೀಲ, ತಾರಾ ಆರ್ ವೈ, ಹೇಮಾ ಶಾಂತಪ್ಪ ಮೊದಲಾದರು ಉಪಸ್ಥಿತರಿದ್ದರು.

ಈ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಮಹಿಳೆಯರನ್ನು ಗುರುತಿಸಿ ಶ್ರೀಮತಿ ಹರಿಣಿ ಸದಾಶಿವ, ಸವಿತಾ ಬೆಳ್ಳಾರೆ, ಹಾಜಿರಾ ಅಬ್ದುಲ್ಲ, ಲತಾ ಚೆನ್ನಕೇಶವ ಮರ್ಕಂಜ, ರಾಜೇಶ್ವರಿ ಎಂ, ಸಿಸ್ಟರ್ ಬಿನೋಮಾ, ಶಶಿಕಲಾ ನೀರಬಿದ್ರೆ, ಸುಮಾ ಸುಬ್ಬರಾವ್ ಇವರನ್ನು ಸನ್ಮಾನಿಸಲಾಯಿತು.
ಜಯನಗರ ನಿವಾಸಿಗಳಾದ ಐವರು ಮಹಿಳೆಯರ ವಿವಿಧ ಕ್ಷೇತ್ರದ ಸಾಧನೆಯನ್ನು ಗುರುತಿಸಿ ಗೀತಾ ರಮೇಶ್, ಹಿರಿಯರಾದ ಕೊರಪ್ಪೋಳು ನಾರಾಜೆ,ಆಟೋ ಚಾಲಕಿ ಗೀತಾ ದಯಾನಂದ, ತಾರಾ ಆರ್ ರೈ ರವರಿಗೆ ನಮ್ಮೂರ ಸೇವಾ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ತಾಲೂಕಿನ ಮಹಿಳಾ ಮಂಡಲಗಳ ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳು, ಜಾನಪದ ನೃತ್ಯ, ಜಾನಪದ ಸಮೂಹ ಗಾನ, ಕಿರು ಪ್ರಹಸನ ಮುಂತಾದ ಕಾರ್ಯಕ್ರಮಗಳು ನಡೆದು ಬಹುಮಾನ ವಿತರಣಾ ಕಾರ್ಯಕ್ರಮ ನಡೆಯಿತು.
ಲೇಖಕಿ ಚಂದ್ರಾವತಿ ಬಡ್ಡಡ್ಕ, ಕಲಾವಿದೆ ಮಂಜುಶ್ರೀ ರಾಘವ ಕಾರ್ಯಕ್ರಮ ನಿರೂಪಿಸಿದರು.
ಮಧುಮತಿ ಶೆಟ್ಟಿ ಬೊಳ್ಳೂರು ಸ್ವಾಗತಿಸಿದರು.