ಕಡಮಕಲ್ ಎಸ್ಟೇಟ್ ಗೆ ಮಡಿಕೇರಿ ಶಾಸಕ ಮಂತರ್ ಗೌಡ ಭೇಟಿ

0

ದಕ್ಷಿಣ ಕನ್ನಡ ಜಿಲ್ಲೆ ಮತ್ತು ಕೊಡಗಿನ ಗಡಿಭಾಗವಾದ ಕಡಮಕಲ್ ಭಾಗಕ್ಕೆ ಮಡಿಕೇರಿ ಶಾಸಕ ಮಂತರ್ ಗೌಡ ಮಾ.10 ರಂದು ಭೇಟಿ ನೀಡಿದರು.

ಈ ಸಂದರ್ಭ ಆ ಭಾಗದ ಜನರು ಆ ಭಾಗದ ನಿವಾಸಿಗಳು ಗಾಳಿಬೀಡು ಕಡಮಕಲ್ಲು ರಸ್ತೆ ಸಂಪರ್ಕ,ವಿದ್ಯುತ್ ಸಮಸ್ಯೆ, ಮೊಬೈಲ್ ಟವರ್ ನ ಸಮಸ್ಯೆ, ಕುಡಿಯುವ ನೀರಿನ ಸಮಸ್ಯೆ ಮತ್ತು ಜಮೀನಿನ ಮೂಲ ದಾಖಲೆಗಳನ್ನು ಸರಿಪಡಿಸುವ ಬಗ್ಗೆ ಚರ್ಚಿಸಿದರು. ಇದಕ್ಕೆ ಶಾಸಕರು ಸಕಾರಾತ್ಮಕವಾಗಿ ಸ್ಪಂದಿಸಿ ವಿದ್ಯುತ್ ಹಾಗೂ ಕುಡಿಯುವ ನೀರಿನ ಸಮಸ್ಯೆಯಾಗಿ ತಕ್ಷಣ ಕ್ರಮ ಕೈಗೊಳ್ಳೋದಾಗಿ ತಿಳಿಸಿದರು.

ರಸ್ತೆ ಸಂಪರ್ಕದ ಬಗ್ಗೆ ಈಗಾಗಲೇ ಪ್ರಕರಣ ನ್ಯಾಯಾಲಯದಲ್ಲಿ ಇರುವುದರಿಂದ ಈ ರಸ್ತೆಯ ಸಂಪರ್ಕಕ್ಕಾಗಿ ಈಗಾಗಲೇ ರಾಜ್ಯ ಸರ್ಕಾರಕ್ಕೆ ಸುಪ್ರೀಂ ಕೋರ್ಟಿನಿಂದ ಕೆಲವು ಆದೇಶಗಳು ಬಂದಿದ್ದು ಅವುಗಳನ್ನು ಪರಿಶೀಲಿಸಿ, ಮುಂದಿನ ದಿನಗಳಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂಬುದಾಗಿ ತಿಳಿಸಿದರು ಅವರೊಂದಿಗೆ ಕೊಡಗು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ಸಿನ ಪ್ರಧಾನ ಕಾರ್ಯದರ್ಶಿ ಕಿರಣ್ ಬುಡ್ಲೆಗುತ್ತು, ಸುಳ್ಯ ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಸತ್ಯಕುಮಾರ್ ಆಡಿಂಜ, ಭವಾನಿ ಶಂಕರ ಕಲ್ಮಡ್ಕ, ಶಶಿಧರ ಎಂ ಜೆ, ಚೇತನ್ ಕಜೆಗದ್ದೆ, ದಿನೇಶ್ ಹಾಲೆಮಜಲು, ಪ್ರದೀಪ್ ಕೆ ಎಲ್, ಸನತ್ ಮುಳುಗಾಡು, ಹರ್ಷ ಕುಮಾರ್ ದೇವಜನ, ರವಿಕುಮಾರ್ ಬಾಳುಗೊಡು, ತೇಜಕುಮಾರ್ ತಳೂರು, ವಿನೂಪ್ ಮಲ್ಲಾರ, ಸತೀಶ್ ಕೊಮ್ಮೆಮನೆ, ಕೊಲ್ಲಮೊಗ್ರು ಮತ್ತು ಹರಿಹರ ಪಲ್ಲತಡ್ಕ ಗ್ರಾ.ಪಂ ಸದಸ್ಯರು, ಸ್ಥಳೀಯ ಮುಖಂಡರು, ಕಲ್ಮಕಾರು ಕೊಲ್ಲಮೊಗು, ಬಾಳುಗೋಡು, ಹರಿಹರ ಪಲತಡ್ಕ ಗುತ್ತಿಗಾರು ಭಾಗದ ರಾಜಕೀಯ, ಸಾಮಾಜಿಕ ಮುಖಂಡರುಗಳು ಉಪಸಿತರಿದ್ದರು.