ಮಾ.14 : ಬೆಳ್ಳಾರೆ ಸ್ಮಾರ್ಟ್ ಅಂಗನವಾಡಿ ಕೇಂದ್ರದ ಲೋಕಾರ್ಪಣೆ

0

ದ.ಕ.ಜಿಲ್ಲಾ ಪಂಚಾಯತು,
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಮಗ್ರ ಶಿಶು ಅಭಿವೃದ್ಧಿ ಯೋಜನೆ ಸುಳ್ಯ, ಬೆಳ್ಳಾರೆ ವಲಯ
ಗ್ರಾಮ ಪಂಚಾಯತು ಬೆಳ್ಳಾರೆ ಆಶ್ರಯದಲ್ಲಿ
ಸೆಲ್ಕೋ ಸೋಲಾರ್ ಲೈಟ್ ಪ್ರೈವೇಟ್ ಲಿ. ಬೆಂಗಳೂರು ಮತ್ತು ಊರ ದಾನಿಗಳ ನೆರವಿನಿಂದ
ಸಂಪೂರ್ಣ ಸೋಲರೀಕರಣದಿಂದ ನವೀಕರಣಗೊಂಡ
ಬೆಳ್ಳಾರೆ ಸ್ಮಾರ್ಟ್ ಅಂಗನವಾಡಿ ಕೇಂದ್ರದ “ಲೋಕಾರ್ಪಣೆ”
ಮಾ.14 ರಂದು ಬೆಳಿಗ್ಗೆ ನಡೆಯಲಿದೆ.
ಸ್ಮಾರ್ಟ್ ಅಂಗನವಾಡಿ ಕೇಂದ್ರದ ಲೋಕಾರ್ಪಣೆಯನ್ನು ಶಾಸಕಿ ಕುಮಾರಿ ಭಾಗೀರಥಿ ಮುರುಳ್ಯ ನೆರವೇರಿಸಲಿದ್ದಾರೆ.
ಬೆಳ್ಳಾರೆ ಗ್ರಾಮ ಪಂಚಾಯತ್
ಅಧ್ಯಕ್ಷೆ ಶ್ರೀಮತಿ ನಮಿತಾ ಎಲ್.ರೈ ಅಧ್ಯಕ್ಷತೆ ವಹಿಸಲಿದ್ದಾರೆ.
ಈ ಸಂದರ್ಭದಲ್ಲಿ ಹಲವು ಜನ ಅತಿಥಿಗಳು ಉಪಸ್ಥಿತರಿರುವರು.