ಇದೇ ಬರುವ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮಾ 13 ರಂದು ತಾಲೂಕು SVEEP ಸಮಿತಿ ವತಿಯಿಂದ ಸುಳ್ಯ ತಾಲೂಕು ಪಂಚಾಯತ್ ಮಿನಿ ಸಭಾಂಗಣದಲ್ಲಿ ಶಾಲಾ ಕಾಲೇಜುಗಳ ELC ಸಂಚಾಲಕರಿಗೆ, ಚುನಾವಣಾ ಪ್ರಚಾರ ರಾಯಬಾರಿಗಳಿಗೆ ಹಾಗೂ ಮತಗಟ್ಟೆ ಅಧಿಕಾರಿಗಳಿಗೆ ಎರಡನೇ ಹಂತದ ಒಂದು ದಿನದ ಸ್ವೀಪ್ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಡಾ. ಜಯಶ್ರೀ ಕೆ. ಸಹಾಯಕ ಪ್ರಾಧ್ಯಾಪಕರು ಸರ್ಕಾರೀ ಪ್ರಥಮ ದರ್ಜೆ ಕಾಲೇಜು ಸುಳ್ಯ ಇವರು ಚುನಾವಣ ಪ್ರಚಾರದ ಅವಶ್ಯಕತೆಯನ್ನು ಮತ್ತು ಅದರ ಮಹತ್ವವನ್ನು ತಿಳಿಸಿದರು. ಜಿಲ್ಲಾ ಮಟ್ಟದ ತರಬೇತುದಾರರಾದ ಶಿವಾನಂದ ಜಿ ಸಹಾಯಕ ಪ್ರಾದ್ಯಾಪಕರು ಸ. ಪ್ರ. ದ.ಕಾಲೇಜು ಸುಳ್ಯ ಇವರು ಪ್ರಾಸ್ತಾವಿಕ ನುಡಿಗಳೊಂದಿಗೆ ಅತಿಥಿಗಳನ್ನು ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಶಿಕ್ಷಕಿ ಅನ್ನಪೂರ್ಣೇಶ್ವರಿ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು. ವೇದಿಕೆಯ ಮೇಲೆ ಸಂದ್ಯಕುಮರಿ ಬಿ ಎಸ್, ಶಿಕ್ಷಣ ಸಂಯೋಜಕಿ ಬೀ, ಇ.ಒ ಕಚೇರಿ ಉಪಸ್ಥಿತರಿದ್ದರು. ತಾಲೂಕ ಮಟ್ಟದ ತರಬೇತುದಾರರು ಅನಂದ ಎಸ್, ಇವರು ಕಾರ್ಯಕ್ರಮವನ್ನು ನಿರೂಪಿಸಿದರು. ಈ ಕಾರ್ಯಕ್ರಮದಲ್ಲಿ ಇತರೆ ತರಬೇತುದಾರರಾದ ವಸಂತ ನಾಯಕ್. ಡಿ, ಪೂರ್ಣಿಮಾ ಟಿ, ಹಾಜರಿದ್ದರು.