ನಿರಂತರ 46ನೇ ವರ್ಷದ ವಾರ್ಷಿಕ ವಿಶೇಷ ಶಿಬಿರ
ರಾಷ್ಟ್ರೀಯ ಸೇವಾ ಯೋಜನೆ ನೆಹರೂ ಮೆಮೋರಿಯಲ್ ಕಾಲೇಜು ಸುಳ್ಯ ಇದರ 46ನೇ ವರ್ಷದ ವಾರ್ಷಿಕ ವಿಶೇಷ ಶಿಬಿರವು ಅಮರಮುಡ್ನೂರು ಗ್ರಾಮದ ಕುಕ್ಕುಜಡ್ಕದ ಪಿಲಿಕಜೆಯ ಶ್ರೀ ಧರ್ಮಶಾಸ್ತ ಭಜನಾ ಮಂದಿರ ದ ಸಭಾಂಗಣದಲ್ಲಿ 3ನೇ ದಿನದ ಸಭಾಕಾರ್ಯಕ್ರಮವು ಮಾ. 13 ರಂದು ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಿಲಿಕಜೆಯ ಶ್ರೀ ಧರ್ಮಶಾಸ್ತ ಭಜನಾ ಮಂದಿರದ ಅಧ್ಯಕ್ಷರಾದ ಲೋಕನಾಥ ಪುಳಿಮಾರಡ್ಕ ವಹಿಸಿದ್ದರು.ಸಂಪನ್ಮೂಲ ವ್ಯಕ್ತಿಯಾಗಿ ಕಲಾವಿದರಾದ ಜಯಪ್ರಕಾಶ್ ಪೆರುಮುಂಡ, ಮುಖೇಶ್ ಬೆಟ್ಟಂಪಾಡಿ,ಹವೀನ್ ಗುಂಡ್ಯ ವಿಜ್ಞಾನ ಮತ್ತು ವೈಜ್ಞಾನಿಕ ಮನೋಧರ್ಮಕ್ಕಾಗಿ ಯುವಜನತೆಗಾಗಿ ರಂಗ, ಹಾಗೂ ಜನಪದ ಮತ್ತು ಜಾಗೃತಿ ಗೀತೆಗಳ ಮೂಲಕ ವಿದ್ಯಾರ್ಥಿಗಳಿಗೆ ಅರಿವನ್ನು ಮೂಡಿಸಿದರು.
ಅತಿಥಿಗಳಾಗಿ ಅಮರಮೂಡ್ನೂರು ಗ್ರಾ.ಪಂಚಾಯತ್ ಸದಸ್ಯ ಕೃಷ್ಣಪ್ರಸಾದ್ ಮಾಡಬಾಗಿಲು, ಪಿಲಿಕಜೆ ಶ್ರೀ ಧರ್ಮಶಾಸ್ತ ಭಜನಾ ಮಂದಿರದ ಸದಸ್ಯರಾದ ಶಿವಪ್ಪ ಗೌಡ ಪಿಲಿಕಜೆ, ಅಮರಮೂಡ್ನೂರು ಗ್ರಾಾ.ಪಂಚಾಯತ್ ಮಾಜಿ ಸದಸ್ಯೆೆ ಶ್ರೀಮತಿ ನಿರ್ಮಲ ರೈ ಶೇಣಿ, ಪಿಲಿಕಜೆಯ ಶ್ರೀ ಧರ್ಮಶಾಸ್ತ ಭಜನಾ ಮಂದಿರದ ಕಾರ್ಯಾಧ್ಯಕ್ಷರಾದ ಗಣೇಶ್ ಪಿಲಿಕಜೆ, ಡಿ.ಸಿ.ಸಿ ಬ್ಯಾಂಕ್ ಮಂಗಳೂರು ಇದರ ಮಾರಾಟಾಧಿಕಾರಿ ಆದರ್ಶ ಬೊಳ್ಳೂರು , ಸುದ್ದಿ ಬಿಡುಗಡೆ ಪತ್ರಿಕೆಯ ವರದಿಗಾರ್ತಿ ಪ್ರಜ್ಞಾ ಎಸ್. ನಾರಾಯಣ್ ಅಚ್ರಪ್ಪಾಡಿ ಅತಿಥಿಗಳಾಗಿ ಉಪಸ್ಥಿತರಿದ್ದರು. ಶಿಬಿರದ ಶಿಬಿರಾಧಿಕಾರಿಗಳಾದ ಸಂಜೀವ ಕುದ್ಪಾಜೆ, ಶ್ರೀಮತಿ ಚಿತ್ರಲೇಖ ಕೆ.ಎಸ್ ವೇದಿಕೆಯಲ್ಲಿ ಉಪಸ್ದಿತರಿದ್ದರು. ನಿಶಾಂತ್ ಎಂ.ಎಚ್ ಸ್ವಾಗತಿಸಿ, ಜಸ್ಮಿತಾ ವಂದಿಸಿ, ಅಖಿಲೇಶ್ ಪಿ.ವೈ ನಿರೂಪಿಸಿದರು.