ವಿದಾನ ಪರಿಷತ್ ಸದಸ್ಯ ಕೋಟ ಶ್ರಿನಿವಾಸ ಪೂಜಾರಿರವರ ಪ್ರದೇಶಾಭಿವೃದ್ಧಿ ನಿಧಿಯಿಂದ ರೂ. 3ಲಕ್ಷ ವೆಚ್ಚದಲ್ಲಿ ಹರಿಹರ ಮುಖ್ಯ ಪೇಟೆಯಲ್ಲಿ ನಿರ್ಮಿಸಲಾದ ಅಟೋರಿಕ್ಷಾ ತಂಗುದಾಣವನ್ನು ಇಂದು ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯರವರು ಉದ್ಘಾಟಿಸಿ ಶುಭಹಾರೈಸಿದರು.
ಹರಿಹರ ಗ್ರಾ. ಪಂ ಅಧ್ಯಕ್ಷ ವಿಜಯ ಅಂಙಣ, ಉಪಾಧ್ಯಕ್ಷ ಜಯಂತ ಬಾಳುಗೋಡು, ಸದಸ್ಯ ರಾದ ಪದ್ಮಾವತಿ ಕಲ್ಲೆಮಠ, ಬಿಂದು ಗುಂಡಿಹಿತ್ಲು, ದಿವಾಕರ ಮುಂಡಾಜೆ, ತಾಲೂಕು ಬಿಜೆಪಿ ಮಂಡಲ ಅಧ್ಯಕ್ಷ ವೆಂಕಟ್ ವಳಲಂಬೆ, ವಿನಯ ಮುಳುಗಾಡು, ಪಿ ಡಿ ಒ ಶಾಂಪ್ರಸಾದ್, ವಿಜಯ ಚಾರ್ಮತ, ಹಿಮ್ಮತ್ ಕಿರಿಭಾಗ, ರವಿ ಗೊಳ್ಯಾಡಿ, ಗುತ್ತಿಗೆದಾರ ರಾಧಾಕೃಷ್ಣ ಕಟ್ಟೆಮನೆ, ಶಿವಹರಿ ಅಟೋರಿಕ್ಷಾ ಚಾಲಕ ಮಾಲಕ ಸಂಘದ ಅಧ್ಯಕ್ಷ ದಯಾನಂದ ಪರಮಲೆ ಹಾಗು ಸದಸ್ಯರು, ಬಿಜೆಪಿ ಬೂತ್ ಸಮಿತಿಯ ಸದಸ್ಯರು,ಹಾಗು ಸ್ಥಳೀಯ ವರ್ತಕರು ಉಪಸ್ಥಿತರಿದ್ದರು.
ಕುಶಾಲಪ್ಪ ಕಾಂತುಕುಮೇರಿ