ಸಂಧ್ಯಾರಶ್ಮಿ ಸಾಹಿತ್ಯ ಸಂಘ, ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಸುಳ್ಯ ಹೋಬಳಿ ಘಟಕಗಳ ಸಂಯುಕ್ತ ಆಶ್ರಯದಲ್ಲಿ ತಿಂಗಳ ಸಾಹಿತ್ಯ ಸಂವಾದ ಮಾಲಿಕೆಯಲ್ಲಿ ಹಿರಿಯ ಸಾಹಿತಿ, ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಅಯ್ಕೆಯಾಗಿರುವ ಡಾ.ಪ್ರಭಾಕರ ಶಿಶಿಲರ ಸಾಹಿತ್ಯ ಸಂವಾದ ಕಾರ್ಯಕ್ರಮ ಸಂಧ್ಯಾರಶ್ಮಿ ಸಭಾಂಗಣದಲ್ಲಿ ಇಂದು ನಡೆಯಿತು.
ಸಂಧ್ಯಾರಶ್ಮಿ ಸಾಹಿತ್ಯ ಸಂಘದ ಅಧ್ಯಕ್ಷೆ ಶ್ರೀಮತಿ ಲೀಲಾ ದಾಮೋದರ್ ಅಧ್ಯಕ್ಷತೆ ವಹಿಸಿದ್ದರು. ನ್ಯೂಸ್ 18 ನ ಚಂದ್ರಶೇಖರ ಮಂಡೆಕೋಲು ಶಿಶಿಲರ ವ್ಯಕ್ತಿತ್ವ ಪರಿಚಯ ಮಾಡಿದರು. ಸಾಹಿತಿ ಮತ್ತು ಕವಯತ್ರಿ ಶ್ರೀಮತಿ ಸ್ಮಿತಾ ಅಮೃತರಾಜ್ ಕೃತಿ ಪರಿಚಯ ಮಾಡಿದರು. ಹಿರಿಯ ಸಾಹಿತಿ ಕುತ್ಯಾಳ ನಾಗಪ್ಪ ಗೌಡ (ಕಿರಣ), ಪ್ರಾಯೋಜಕರಾದ ಡಾ.ಶಂಕರ ಪಾಟಾಳಿ ಬದಿಯಡ್ಕ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಭಾವನಾ ಬಳಗದ ಕೆ.ಆರ್.ಗೋಪಾಲಕೃಷ್ಣ ಸ್ವಾಗತಿಸಿದರು. ಸಾಹಿತಿ ಸಂಗೀತಾ ರವಿರಾಜ್ ವಂದಿಸಿದರು.
ಕಸಾಪ ಹೋಬಳಿ ಘಟಕದ ಅಧ್ಯಕ್ಷೆ ಶ್ರೀಮತಿ ಚಂದ್ರಾವತಿ ಬಡ್ಡಡ್ಕ ಕಾರ್ಯಕ್ರಮ ನಿರೂಪಿಸಿದರು.
ಸಂವಾದದಲ್ಲಿ ಡಾ.ಚಂದ್ರಶೇಖರ ದಾಮ್ಲೆ, ಡಾ.ಪೂವಪ್ಪ ಕಣಿಯೂರು, ಕುಮಾರ ಸ್ವಾಮಿ ತೆಕ್ಕುಂಜ, ಡಾ.ಎಸ್.ರಂಗಯ್ಯ, ಲಲಿತಾಜ ಮಲ್ಲಾರ,ಬಾಬು ಗೌಡ ಅಚ್ರಪ್ಪಾಡಿ, ಪದ್ಮನಾಭನ್ ನಾಯರ್, ಎ.ಅಬ್ದುಲ್ಲ ಅರಂತೋಡು ಭಾಗವಹಿಸಿದರು.ಡಾ.ಪ್ರಭಾಕರ ಶಿಶಿಲ ಮಾತನಾಡಿದರು.
ಗಾಯಕ ಕೆ.ಆರ್.ಗೋಪಾಲಕೃಷ್ಣ ಡಾ.ಶಿಶಿಲರ ಕವಿತೆಗಳನ್ನು ಹಾಡಿ ರಂಜಿಸಿದರು.