ಗುತ್ತಿಗಾರು ಲಯನ್ಸ್ ಕ್ಲಬ್ ಗೆ ಜಿಲ್ಲಾ ಗವರ್ನರ್ ಅಧಿಕೃತ ಭೇಟಿ ಕಾರ್ಯಕ್ರಮ

0

ಲಯನ್ಸ್ ಜಿಲ್ಲೆ 317 ರ ಜಿಲ್ಲಾ ಗವರ್ನರ್ ಭಾರತಿ ಬಿ. ಎಂ ಗುತ್ತಿಗಾರು ಲಯನ್ಸ್ ಕ್ಲಬ್ ಗೆ ಜ.22 ರಂದು ಅಧಿಕೃತ ಭೇಟಿ ನೀಡಿದರು. ಸಂಜೆ ನಡೆದ ಸಮಾರಂಭದಲ್ಲಿ ಸಮಾರಂಭದ ಅಧ್ಯಕ್ಷತೆಯನ್ನು ಲಯನ್ಸ್ ಕ್ಲಬ್ ಗುತ್ತಿಗಾರು ಇದರ ಅಧ್ಯಕ್ಷ ಕುಶಾಲಪ್ಪ ತುಂಬತ್ತಾಜೆ ವಹಿಸಿದ್ದರು.

ಕಾರ್ಯಕ್ರಮವನ್ನು ಜಿಲ್ಲಾ ಗವರ್ನರ್ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ವೇದಿಕೆಯಲ್ಲಿ ಲಯನ್ಸ್ ಪ್ರಾಂತ್ಯ ಅಧ್ಯಕ್ಷ ಗಂಗಾಧರ ರೈ, ವಲಯಾಧ್ಯಕ್ಷ ರೂಪಾಶ್ರೀ ರೈ, ಎನ್.ವೈ ಅಮೃತ ಅಪ್ಪಣ್ಣ, ಗುತ್ತಿಗಾರು ಲಯನ್ ಕ್ಲಬ್ ನ ನಿಕಟ ಪೂರ್ವ ಅಧ್ಯಕ್ಷ ಜಯರಾಮ ಕಡ್ಲಾರು, ಕಾರ್ಯದರ್ಶಿ ವೆಂಕಪ್ಪ ಕೇನಾಜೆ, ಕೋಶಾಧಿಕಾರಿ ಪುರುಷೋತ್ತಮ ಮಣಿಯಾನ ವೇದಿಕೆಯಲ್ಲಿದ್ದರು. ಈ ಸಂದರ್ಭ ಲಯನ್ಸ್ ಕ್ಲಬ್ ಗುತ್ತಿಗಾರು ವತಿಯಿಂದ ಕ್ಯಾನ್ಸರ್ ಪೇಡಿತ ವ್ಯಕ್ತಿಗೆ ಧನ ಸಹಾಯ ಮಾಡಲಾಯಿತು. ವಸಂತ ರತ್ನ ವಿಶೇಷ ಚೇತನ ಶಾಲೆ ಕರಿಂಬಿಲ, ಮುರುಳ್ಯ, ಇಲ್ಲಿಗೆ ದೇಣೆಗೆ ನೀಡಲಾಯಿತು.

ನಿವೃತ್ತ ಅಂಚೆಪಾಲಕ ಚೆನ್ನಕೇಶವ ಪಾರೆಪ್ಪಾಡಿ ಅವರಿಗೆ ಹಾಗೂ ಯೋಗ ಸಾಧಕರಾದ ಜಿಶಾ ಕೊರಬಡ್ಕ ಮತ್ತು ನಿಹಾನಿ ವಾಲ್ತಾಜೆ ಅವರನ್ನು ಸನ್ಮಾನಿಸಲಾಯಿತು. ನೂತನವಾಗಿ ಲಯನ್ಸ್ ಕ್ಲಬ್ ಸೇರಿದ ಸನತ್ ಮುಳುಗಾಡು, ಸುಬ್ರಹ್ಮಣ್ಯ ಪಾಲ್ತಾಡು, ಜೇಮಿನ್ ಜೋಸೆಫ್ ಅವರಿಗೆ ಗವರ್ನರ್ ಅವರು ಪದಗ್ರಹಣ ಮಾಡಿಸಿದರು . ವೆಂಕಪ್ಪ ಕೇನಾಜೆ ವರದಿ ವಾಚಿಸಿದರು. ಕುಶಾಲಪ್ಪ ತುಂಬತ್ತಾಜೆ ಸ್ವಾಗತಿಸಿ, ಪುರುಷೋತ್ತಮ ಮಣಿಯಾನ ವಂದಿಸಿದರು.