ಕೇರ್ಪಡ – ಪಲ್ಲತ್ತಡ್ಕ ಶ್ರೀ ನಾಗಬ್ರಹ್ಮ ಆದಿಮೊಗೇರ್ಕಳ ನೇಮೋತ್ಸವವು ಮಾ.10 ರಿಂದ 11 ರವರೆಗೆ ನಡೆಯಿತು.
ಮಾ.10 ರಂದು ಬೆಳಿಗ್ಗೆ ನಾಗ ತಂಬಿಲ ನಡೆದು, ಸಂಜೆ ಶ್ರೀ ಮೊಗೇರ್ಕಳ ತನ್ನಿ ಮಾನಿಗ ಹಾಗೂ ಕೊರಗಜ್ಜ ದೈವಗಳ ಭಂಡಾರ ತೆಗೆಯುವುದು ನಡೆಯಿತು. ರಾತ್ರಿ ಸಾರ್ವಜನಿಕ ಅನ್ನಸಂತರ್ಪಣೆಯ ಬಳಿಕ ಶ್ರೀ ಆದಿಮೊಗೇರ್ಕಳ ಗರಡಿ ಇಳಿಯುವುದು, ತನ್ನಿ ಮಾನಿಗ ಗರಡಿ ಇಳಿದು ರಂಗಪ್ರವೇಶ ನಡೆಯಿತು.
ಮಾ.11 ರಂದು ಬೆಳಿಗ್ಗೆ ಪೂಜಾರಿಗಳಿಗೆ ಸೇಟಾಗುವುದು ನಡೆದು, ತನಿಮಾನಿಗ, ಮೊಗೇರ್ಕಳ ದೈವಗಳ ಪ್ರಸಾದ ವಿತರಣೆ ಹರಿಕೆ, ಬಳಿಕ 6.30ರಿಂದ ಕೊರಗತನಿಯ ದೈವದ ನೇಮ ನಡೆದು ಪ್ರಸಾದ ವಿತರಣೆ ನಡೆಯಿತು.
ಕಾರ್ಯಕ್ರಮದ ಸ್ಥಳಧಾನಿ ಎ.ಆರ್ ಸುಧಾಕರ್ ಭಟ್ , ಶಾಸಕಿ ಭಾಗಿರಥೀ ಮುರುಳ್ಯ , ಕುಕ್ಕೇಟಿ ದೇವಸ್ಥಾನದ ಅನುವಂಶಿಕ ಮೊಕ್ತೇಶರರಾದ ಚಿನ್ನಯ್ಯ ಆಚಾರ್ಯ, ಕೆಮ್ಮಲೆ ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಬಾಲಕೃಷ್ಣ .ಕೆ , ಎಡಮಂಗಲ ಸೊಸೈಟಿ ಅಧ್ಯಕ್ಷ ರಾಮಕೃಷ್ಣ ರೈ ಮಾಲೆಂಗಿರಿ, ನಿರ್ದೇಶಕ ಅವಿನಾಶ್ ದೇವರಮಜಲು , ಆನಂದ ಗೌಡ ಕೇರ್ಪಡ, ಚೆನ್ನಪ್ಪಗೌಡ , ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷ ಪಿ.ಡಿ.ಆರ್ , ಮೊಗೇರ್ಕಳ ಸೇವಾ ಸಮಿತಿ ಅಧ್ಯಕ್ಷ ರಮೇಶ್ ಕೆ, ಮತ್ತು ಪದಾಧಿಕಾರಿಗಳು ,ಭಕ್ತಾದಿಗಳು ಪಾಲ್ಗೊಂಡಿದ್ದರು.