ಲೋಕಸಭಾ ಚುನಾವಣೆ ಘೋಷಣೆಗೆ ಕ್ಷಣಗಣನೆ ಹಿನ್ನೆಲೆ

0

ಅರಂತೋಡು ಹಾಗೂ ಸಂಪಾಜೆ ಗ್ರಾ.ಪಂ. ವ್ಯಾಪ್ತಿಯಲ್ಲಿ ಬ್ಯಾನರ್ ತೆರವುಗೊಳಿಸಲು ಗ್ರಾ.ಪಂ. ಆದೇಶ

ಲೋಕಸಭಾ ಸಾರ್ವತ್ರಿಕ ಚುನಾವಣೆಗೆ ಕೇಂದ್ರ ಚುನಾವಣಾ ಆಯೋಗವು ಮಾ.16ರಂದು ಅಪರಾಹ್ನ ದಿನಾಂಕ ಘೋಷಣೆ ಮಾಡಲಿದ್ದು,ಅರಂತೋಡು ಮತ್ತು ದ. ಕ. ಸಂಪಾಜೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಾರ್ವಜನಿಕ ಮತ್ತು ಖಾಸಗಿ ಜಾಗದಲ್ಲಿರುವ ಎಲ್ಲಾ ರೀತಿಯ ಬ್ಯಾನರ್ ಹಾಗೂ ಪ್ಲೆಕ್ಸ್ ಗಳನ್ನು ತೆರವುಗೊಳಿಸುವಂತೆ ಆದೇಶಿಸಲಾಗಿದೆ.

ಲೋಕಸಭಾ ಚುನಾವಣೆ ಘೋಷಣೆ ಆದ ಮರುಕ್ಷಣದಿಂದ ನೀತಿ ಸಂಹಿತೆ ಜಾರಿಗೆ ಬರಲಿರುವ ಕಾರಣದಿಂದ ಬ್ಯಾನರ್ ಗಳನ್ನು ತಾವಾಗಿ ತೆರವುಗೊಳಿಸುವಂತೆ ಸಾರ್ವಜನಿಕರಿಗೆ ಗ್ರಾ.ಪಂ. ವತಿಯಿಂದ ಆದೇಶಿಸಲಾಗಿದೆ.