ಎಲ್ಲರೂ ಮತದಾನ ಚಲಾಯಿಸುವುದು ಮುಖ್ಯ ಉದ್ದೇಶ
ಭಾರತ ಚುನಾವಣಾ ಆಯೋಗ ದಕ್ಷಿಣ ಕನ್ನಡ ಜಿಲ್ಲೆ ಸ್ವೀಪ್ ಸಮಿತಿ ಹಾಗೂ ಸರಕಾರಿ ಪ್ರಥಮ ಕಾಲೇಜು ವಿದ್ಯಾರ್ಥಿಗಳಿಂದ ಮತದಾನ ಜಾಗೃತಿ ಬೀದಿ ನಾಟಕ ಪ್ರದರ್ಶನ ಸುಳ್ಯದ ಖಾಸಾಗಿ ಬಸ್ ನಿಲ್ದಾಣದಲ್ಲಿ ಮಾ.18 ರಂದು ನಡೆಯಿತು.
ಕಾರ್ಯಕ್ರಮದಲ್ಲಿ ರಾಜ್ಯಶಾಸ್ತ್ರ ಪ್ರಾಧ್ಯಾಪಕರು,ಸ್ವೀಪ್ ಸಂಚಾಲಕಿ ಡಾ.ಜಯಶ್ರೀ ಮತ್ತು ಸ್ವೀಪ್ ತರಬೇತುದಾರ ಶಿವಾನಂದ ಜಿ, ಮತದಾನ ಜಾಗೃತಿ ಹಕ್ಕಿನ ಬಗ್ಗೆ ತಿಳಿಸಿದರು.
ಬಳಿಕ ಮತದಾನ ಪ್ರತಿಜ್ಞಾ ಸ್ವೀಕಾರ ಮಾಡಿದರು. ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಸತೀಶ್ ಕುಮಾರ್ ಕೆ. ಆರ್ ಮಾತನಾಡಿ ಮತದಾನ ಹಕ್ಕು ಪ್ರತಿಯೊಬ್ಬ ವ್ಯಕ್ತಿಯ ಹಕ್ಕು, ಆ ಹಕ್ಕನ್ನು ಹಣ ಮದ್ಯಪಾನ ಆಮಿಷಗಳಿಗೆ ಬೀಳದೆ, ದೇಶಕ್ಕೆ ಸೇವೆ ಮಾಡುವ ನಾಯಕನನ್ನು ಸೂಚಿಸುವಂತೆ ಆಗಬೇಕು, ಹಾಗೂ ಮತದಾನ ಪ್ರತೀ ಪೌರನ ಕರ್ತವ್ಯವಾಗಿದೆ. ಎಲ್ಲರೂ ಮತದಾನ ಮಾಡಿ ಒಳ್ಳೆಯ ದೇಶವನ್ನು ಕಟ್ಟೋಣ ಎಂದರು. ಕಾಲೇಜಿನ ಹಳೆಯ ವಿದ್ಯಾರ್ಥಿ ಶ್ರೀ ದೇವಿ ಪ್ರಸಾದ್ ಜಾಗೃತಿ ಗೀತೆ ಹಾಡಿದರು. ನಂತರದ ಕಾಲೇಜಿನ ವಿದ್ಯಾರ್ಥಿಗಳಿಂದ ಮತದಾನ ಜಾಗೃತಿ ಬೀದಿ ನಾಟಕ ನಡೆಯಿತು. ಈ ವೇಳೆ ನಗರ ಪಂಚಾಯತ್ ಸಿಬ್ಬಂದಿ, ಪೋಲೀಸ್ ಸಿಬ್ಬಂದಿ, ಸ್ವೀಪ್ ಸಮಿತಿ, ಕಾಲೇಜಿನ ಉಪನ್ಯಾಸಕ ವೃಂದ, ಕಾಲೇಜಿನ ವಿದ್ಯಾರ್ಥಿಗಳು , ಸಾರ್ವಜನಿಕರು ಉಪಸ್ಥಿತರಿದ್ದರು.