ಅರಣ್ಯ ಇಲಾಖೆಯ ಉಪ ವಲಯಾರಣ್ಯಾಧಿಕಾರಿಗಳು ಹಾಗೂ ಗಸ್ತು ಸಿಬ್ಬಂದಿಗಳ ವರ್ಗಾವರ್ಗಿ ನಡೆದಿದೆ.
ಸುಳ್ಯ, ಪಂಜ, ಸುಬ್ರಹ್ಮಣ್ಯ ಮೂರು ವಲಯದಲ್ಲಿಯೂ ವರ್ಗಾವಣೆಯಾಗಿದೆ.
ಸುಳ್ಯ ವಲಯ : ನೆಲ್ಲೂರುಕೆಮ್ರಾಜೆ ವ್ಯಾಪ್ತಿಯ ಫಾರೆಸ್ಟರ್ ರವೀಂದ್ರ ಮಡ್ತಿಲರಿಗೆ ಪುತ್ತೂರು ವಲಯಕ್ಕೆ, ಸುಳ್ಯ ಡಿಪೋ ಫಾರೆಸ್ಟರ್ ಗಳಾಗಿದ್ದ ಸೌಮ್ಯ ಎ.ಜೆ. ಯವರು ಪುತ್ತೂರು ವಲಯ ಹಾಗೂ ಪರಮೇಶ್ವರ ಪಟಗಾರ ಕುಂದಾಪುರಕ್ಕೆ, ಚಿದಾನಂದ ಪರೀಟ ಸುಳ್ಯ ಎಸಿಎಫ್ ಕಚೇರಿಯಿಂದ ಬೈಂದೂರು ವಲಯಕ್ಕೆ, ಉಮೇಶ್ ಕೆ.ಜೆ. ಪಂಜ ವಲಯಕ್ಕೆ, ಯಶೋಧರ ಡಿ ಸುಳ್ಯ ಶಾಖೆಯಿಂದ ಸುಳ್ಯ ಎಸಿಎಫ್ ಕಚೇರಿಗೆ, ಶಶಿಕುಮಾರ್ ಸುಳ್ಯ ಶಾಖೆಯಿಂದ ಸುಳ್ಯ ಎಸಿಎಫ್ ಕಚೇರಿಗೆ, ವೀರಭದ್ರಯ್ಯ ಕರಣಿಮಠ ಸುಳ್ಯ ಎಸಿಎಫ್ ಕಚೇರಿಯಿಂದ ಸಾಮಾಜಿಕ ಅರಣ್ಯ ಇಲಾಖೆ ಸುಳ್ಯಕ್ಕೆ, ಶಿವಕುಮಾರ್ ಮಂಗಳೂರು ಡಿಎಫ್ ಒ ಕಚೇರಿಗೆ, ವೆಂಕಟೇಶ ಆಲೆಟ್ಟಿ ಶಾಖೆಯಿಂದ ಸುಳ್ಯ ವಲಯ ಶಾಖೆಗೆ ವರ್ಗಾವಣೆಗೊಂಡು ಬಂದಿದ್ದಾರೆ.
ಗಸ್ತು ಸಿಬ್ಬಂದಿಗಳು : ಅಜ್ಜಾವರ ಗಸ್ತು ಸಿಬ್ಬಂದಿ ದಿವೀಶ್ ಕೆ ಪುತ್ತೂರು ವಲಯಕ್ಕೆ, ಧರ್ಮರಾಜ ನೆಲ್ಲೂರುಕೆಮ್ರಾಜೆ ಗಸ್ತಿನಿಂದ ಮೂಡಬಿದಿರೆಗೆ, ಪುಷ್ಪವತಿ ಸುಳ್ಯ ಸಿಟಿಡಿ ಯಿಂದ ಸುಳ್ಯ ವಲಯ ಕಚೇರಿಗೆ, ನಿಂಗಪ್ಪ ಕೊಪ್ಪ ಮಂಡೆಕೋಲು ಗಸ್ತಿನಿಂದ ಸುಳ್ಯ ಸಿಟಿಡಿಗೆ ವರ್ಗಾವಣೆ ಆದೇಶವಾಗಿದೆ.
ಹೊಸಬರ ಆಗಮನ : ಫಾರೆಸ್ಟರ್ ರಾಘವೇಂದ್ರ ಪ್ರಸಾದ ಎಂಬವರು ಬಂಟ್ಚಾಳದಿಂದ ಸುಳ್ಯ ವಲಯಕ್ಕೆ, ವಿನಾಯಕ ದುರದುಂಡಿ ಎಂಬವರು ಮೂಡಬಿದಿರೆಯಿಂದ ಸುಳ್ಯ ವಲಯಕ್ಕೆ, ಕೆಜೆಪ್ರಸಾದ್ ಪುತ್ತೂರು ವಲಯದಿಂದ ಸುಳ್ಯ ಸಿಟಿಡಿ ಗೆ, ಮಂಗಳೂರು ವಲಯದ ಸಂದೀಪ್ ಸುಳ್ಯ ಸಿಟಿಡಿ ಗೆ ಬರಲಿದ್ದಾರೆ.
ಪಂಜ ವಲಯ :
ಉಪವಲಯ ಅರಣ್ಯಧಿಕಾರಿ ರವಿಪ್ರಕಾಶರು ಪಂಜ ಶಾಖೆ ಇಂದ ಪುತ್ತೂರು ಉಪವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಯವರ ಕಚೇರಿಗೆ, ಫಾರೆಸ್ಟರ್ ಮಂಜುನಾಥ್ ನಾಯ್ಕ್, ಪಂಜ ವಲಯದ ಹೆಚ್ಚುವರಿ ಹುದ್ದೆ ಇಂದ ಪಂಜ ವಲಯದ ಹೆಚ್ಚುವರಿ ಹುದ್ದೆಗೆ, ಫಾರೆಸ್ಟರ್ ಉಮೇಶ್
ಸುಬ್ರಮಣ್ಯ ಉಪವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಯವರ ಕಚೇರಿ ಇಂದ ಪಂಜ ವಲಯದ ಐ. ಸಿ.ಟಿ ಘಟಕ ಕ್ಕೆ, ಫಾರೆಸ್ಟರ್ ಮದನ್ ಬಿ ಕೆ
ಉಪ ವಲಯ ಅರಣ್ಯಧಿಕಾರಿ ಪಂಜ ವಲಯದ ಕೇಂದ್ರಸ್ಥಾನ ದಿಂದ ಪುತ್ತೂರು ವಲಯದ ಪಾಣಾಜೆ ಶಾಖೆ ಗೆ, ಸುಬ್ರಮಣ್ಯ ಕೆ
ಉಪ ವಲಯ ಅರಣ್ಯಧಿಕಾರಿ ಪಂಜ ಐ. ಸಿ. ಟಿ ಇಂದ ಪಂಜ ವಲಯದ ಕೇಂದ್ರ ಸ್ಥಾನ ಕ್ಕೆ, ಮಹೇಶ್ ಕೆ ಕೊಳ್ಳಿ
ಪಂಜ ವಲಯದ ಐವತೋಕ್ಲು ಗಸ್ತಿ ನಿಂದ ಸುಬ್ರಮಣ್ಯ ವಲಯ ಕಚೇರಿಗೆ, ದಿನೇಶ್ ಕುಮಾರ್ ಬಿ
ಪಂಜ ವಲಯದ ಗುತ್ತಿಗಾರ್ ಗಸ್ತಿ ನಿಂದ ಮಂಗಳೂರು ವಲಯ ಕಚೇರಿಗೆ ವರ್ಗಾವಣೆಯಾಗಿರುವುದಾಗಿ ತಿಳಿದುಬಂದಿದೆ.