ಕೂಜಿಮಲೆಗೆ ನಕ್ಸಲರ ಭೇಟಿ ಹಿನ್ನೆಲೆ

0

ಕೂಂಬಿಂಗ್ ಕಾರ್ಯಾಚರಣೆ ಮತ್ತಷ್ಟು ವಿಸ್ತರಣೆ

ಚೆಂಬು, ಕರಿಕೆ, ಬಿಸಿಲೆ ಅರಣ್ಯಗಳಲ್ಲೂ ಕಾರ್ಯಾಚರಣೆ

ಕೂಜಿಮಲೆಗೆ ಶನಿವಾರ ಭೇಟಿ ಕೊಟ್ಟವರು ನಕ್ಸಲರೇ ಎಂದು ದೃಢಪಟ್ಟಿರುವ ಹಿನ್ನೆಲೆಯಲ್ಲಿ ನಕ್ಸಲ್ ನಿಗ್ರಹ ಪಡೆಯಿಂದ ಆರಂಭಗೊಂಡಿರುವ ಕೂಂಬಿಂಗ್ ಕಾರ್ಯಾಚರಣೆ ಇಂದು ಮತ್ತಷ್ಟು ಪ್ರದೇಶಗಳಿಗೆ ವಿಸ್ತರಣೆಯಾಗಿದೆ ಎಂದು ತಿಳಿದುಬಂದಿದೆ.

ಸೋಮವಾರ ಕೂಜಿಮಲೆ ಗೆ ಬಂದಿದ್ದ ನಕ್ಸಲ್ ನಿಗ್ರಹ ಪಡೆಯ ವರು ಮೂರು ಪ್ರದೇಶಗಳಿಂದ ಕೂಂಬಿಂಗ್ ನಡೆಸಿದ್ದರು.

ಮಂಗಳವಾರ ಈ ಪ್ರದೇಶದ ಎರಡು ಕಡೆಗಳಲ್ಲಿ ಕಾರ್ಯಾಚರಣೆ ನಡೆದಿದ್ದರೆ ಪುಷ್ಪಗಿರಿ ಅರಣ್ಯ ಪ್ರದೇಶದ ಬಿಸಿಲೆ ಹಾಗೂ ಬ್ರಹ್ಮಗಿರಿ ಅರಣ್ಯದ ಚೆಂಬು, ಕರಿಕೆ ಪ್ರದೇಶಗಳಲ್ಲೂ ಕಾರ್ಯಾಚರಣೆ ನಡೆಯುತ್ತಿದೆ.‌ ಮುಂದಿನ ಕೆಲವು ದಿನಗಳ ಕಾಲ ಈ ಅರಣ್ಯ ಶ್ರೇಣಿಗಳಲ್ಲಿ ಕೂಂಬಿಂಗ್ ಕಾರ್ಯಾಚರಣೆ ನಡೆಯಲಿರುವುದಾಗಿ ತಿಳಿದು ಬಂದಿದೆ.

ನಕ್ಸಲ್ ನಿಗ್ರಹ ಪಡೆಯ ಎಸ್.ಪಿ. ಜಿತೇಂದ್ರಕುಮಾರ್, ಡಿವೈಎಸ್ಪಿ ರಾಘವೇಂದ್ರ ಮಡಿಕೇರಿಯಲ್ಲಿ ಮೊಕ್ಕಾಂ ಹೂಡಿದ್ದಾರೆ. ಕೂಜಿಮಲೆ ಪ್ರದೇಶಕ್ಕೆ ಇಂದು ಮಡಿಕೇರಿ ಪೊಲೀಸ್ ಅಧಿಕಾರಿಗಳ ತಂಡ ಭೇಟಿ ನೀಡಿದೆ.