ಸುಬ್ರಹ್ಮಣ್ಯ ರೋಟರಿ ಕ್ಲಬ್ಬಿಗೆ ರೋಟರಿ ಜಿಲ್ಲೆ 31 81 ಇದರ ಜಿಲ್ಲಾ ಗವರ್ನರ್ ಎಚ್.ಆರ್. ಕೇಶವ ಅವರು ಮಾ. 16 ರಂದು ಅಧಿಕೃತ ಭೇಟಿ ನೀಡಿ ವಿವಿಧ ಕೊಡುಗೆಗಳು ಹಾಗೂ ಸಹಾಯಧನ ಹಸ್ತಾಂತರ ಮಾಡಿರುವರು. ಪಂಜ ಸಿ.ಎ. ಬ್ಯಾಂಕ್ ಬಳಿ ಜಿಲ್ಲಾ ಗವರ್ನರ್ ಅವರನ್ನು ಸುಬ್ರಹ್ಮಣ್ಯ ರೋಟರಿ ಕ್ಲಬ್ಬಿನವರು ಬರಮಾಡಿಕೊಂಡರು.
ಅಲ್ಲಿಂದ ಬಳ್ಳಕ್ಕ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿ ಅಲ್ಲಿ ಮಾಯಿಲಪ್ಪ ಸಂಕೇಶ್ ಅವರು ಕೊಡ ಮಾಡಿದ 9 ಅಂಗನವಾಡಿ ಕೇಂದ್ರಗಳಿಗೆ ಅಡುಗೆ ಸ್ಟೌ ಗಳನ್ನ ಉಚಿತವಾಗಿ ವಿತರಣೆ ಮಾಡಲಾಯಿತು. ಬಳ್ಪ ಎಡೋಣಿ ಶಿಶುಮಂದಿರಕ್ಕೆ ಭೇಟಿ ನೀಡಿ ಅಲ್ಲಿ ಚಿಕ್ಕ ಮಕ್ಕಳಿಗೆ ಚೇರ್ ಹಾಗೂ ಅಡಿಗೆ ಪರಿಕರಗಳನ್ನು ವಿತರಣೆ ಮಾಡಲಾಯಿತು. ಏನೇಕಲ್ಲು ಶಾರದಾ ಗುಡ್ಡೆ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿ ಅಲ್ಲಿ ಕೈಗೊಳ್ಳಲಾದ ವರ್ಲಿ ಚಿತ್ರಗಳನ್ನು ಅನಾವರಣ ಮಾಡಲಾಯಿತು. ಏನೇಕಲ್ಲು ಬಾನಡ್ಕದಲ್ಲಿ ಡಾ.ರವಿ ಕಕ್ಕೆ ಪದವು ಅವರು ದಾನ ರೂಪದಲ್ಲಿ ಕೊಡ ಮಾಡಿದ ಜಾಗ ಫಲಾನುಭವಿಗೆ ಹಸ್ತಾಂತರಿಸಲಾಯಿತು.
ನಂತರ ಏನೇಕಲ್ಲು ಬಸ್ ನಿಲ್ದಾಣದ ಪಕ್ಕ ರೋಟರಿ ಕ್ಲಬ್ ಅಧ್ಯಕ್ಷಪ್ರಶಾಂತ ಕೋಡಿಬೈಲ್ ಕೊಡ ಮಾಡಿದ ಆಟೋರಿಕ್ಷಾ ನಿಲ್ದಾಣ ವನ್ನು ಲೋಕಾರ್ಪಣೆಗೊಳಿಸಲಾಯಿತಏನೆಕಲ್ಲು ಡಿ .ಇ. ರಾಯಲ್ ಹೋಟೆಲ್ ನಲ್ಲಿ ನಡೆದ ಸಾರ್ವಜನಿಕ ಸಮಾರಂಭದಲ್ಲಿ ಸಾಧನೆಗೇಯ್ದ ಸಾಧಕರುಗಳನ್ನು ಸನ್ಮಾನಿಸಲಾಯಿತು. ಹಾಗೆ ವಿವಿಧ ಕಡೆಗಳಲ್ಲಿ ಕೊಡುಗೆಯಾಗಿ ನೀಡಿದ ರೋಟರಿ ಕ್ಲಬ್ಬಿನ ದಾನಿಗಳನ್ನು ಗೌರವಿಸಲಾಯಿತು.
ಈ ಎಲ್ಲಾ ಸಂದರ್ಭಗಳಲ್ಲಿ ರೋಟರಿ ಅಸಿಸ್ಟೆಂಟ್ ಗವರ್ನರ್ ಪುರಂದರ ರೈ ,ಸುಬ್ರಹ್ಮಣ್ಯ ರೋಟರಿ ಕ್ಲಬ್ಬಿನ ಅಧ್ಯಕ್ಷರು ,ಪದಾಧಿಕಾರಿಗಳು, ಇನ್ನರ್ ವೇಲ್ ಕ್ಲಬ್ಬಿನ ಅಧ್ಯಕ್ಷರು, ಸದಸ್ಯರುಗಳು ,ಹಾಗೂ ರೋಟರಿ ಕ್ಲಬ್ಬಿನ ಎಲ್ಲಾ ಸದಸ್ಯರು ಹಾಜರಿದ್ದರು.