ಐವರ್ನಾಡಿನಲ್ಲಿ ಮನೆಯಿಂದ ಅಡಿಕೆ ಕಳ್ಳತನ ಮಾಡಿದ ಘಟನೆ ಮಾ.14 ರಂದು ರಾತ್ರಿ ನಡೆದಿದ್ದು ಸುಳ್ಯದ ಆರೋಪಿಯನ್ನು ಬಂಧಿಸುವಲ್ಲಿ ಬೆಳ್ಳಾರೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಐವರ್ನಾಡನ ಕುಳ್ಳಂಪಾಡಿ ಹಿರಿಯಣ್ಣ ಎಂಬವರ ಮನೆಯಲ್ಲಿ ಸುಲಿದಿಟ್ಟ ಸುಮಾರು 2.5 ಕ್ವಿಂಟಾಲ್ ಅಡಿಕೆಯನ್ನು ಕಳ್ಳರು ಕದ್ದಿರುವುದಾಗಿ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.
ಪ್ರಕರಣ ದಾಖಲಿಸಿಕೊಂಡ ಪೊಲಿಸರು ಅಡಿಕೆ ಕಳ್ಳತನ ಮಾಡಿದ ಒಬ್ಬ ಆರೋಪಿಯನ್ನು ಬಂಧಿಸಿದ್ದಾರೆ.
ಇನ್ನೊಬ್ಬ ಆರೋಪಿಗಾಗಿ ಹುಡುಕಾಟ ನಡೆಸುತ್ತಿರುವುದಾಗಿ ತಿಳಿದು ಬಂದಿದೆ.ರಿಕ್ಷಾದಲ್ಲಿ ಅಡಿಕೆ ಸಾಗಿಸಿದ್ದು ಅಡಿಕೆಯನ್ನು ನೆಲ್ಯಾಡಿಯಲ್ಲಿ ಮಾರಾಟಮಾಡಿರುವುದಾಗಿ ತಿಳಿದು ಬಂದಿದೆ.ಹೆಚ್ಚಿನ ಮಾಹಿತಿ ತಿಳಿದುಬರಬೇಕಷ್ಟೆ.