ಪಬ್ಲಿಕ್ ಪರೀಕ್ಷೆಯಲ್ಲಿ ಶೇ 100 ಫಲಿತಾಂಶದೊಂದಿಗೆ 7 ತರಗತಿಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾದ ಸಮಹಾದಿ ಮದ್ರಸ ವಿದ್ಯಾರ್ಥಿಗಳು

0

ಇಸ್ಲಾಮಿಕ್ ಎಜುಕೇಷನಲ್ ಬೋರ್ಡ್ ಆಫ್ ಇಂಡಿಯಾ 2023-24 ಸಾಲಿನ 5 ಮತ್ತು7 ನೇ ತರಗತಿ ಪಬ್ಲಿಕ್ ಪರೀಕ್ಷೆಯಲ್ಲಿ ರಿಫಾಯಿ ಜುಮ್ಮಾ ಮಸ್ಜಿದ್ ಸಮಹಾದಿ ಇದರ ಅಧೀನದಲ್ಲಿರುವ ನುಸ್ರತುಲ್ ಇಸ್ಲಾಂ ಮದ್ರಸ ಸಮಹಾದಿ ಮದ್ರಸಕ್ಕೆ ಈ ಬಾರಿ ಶೇ 100% ರಷ್ಟು ಫಲಿತಾಂಶ ಮತ್ತು 7 ನೇ ತರಗತಿಯ ವಿಧ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ ಪಾಸಾಗಿ ವಿಶಿಷ್ಟ ಸಾಧನೆ ಮಾಡಿದ್ದಾರೆ

7 ನೇ ತರಗತಿಯ ಫಾತಿಮತ್ ಇಫ್ನಾ 600 ರಲ್ಲಿ 576 ಅಂಕಗಳನ್ನು ಪಡೆಯುವ ಮೂಲಕ ಪ್ರಥಮ ಸ್ತಾನಿಯಾಗಿದ್ದಾರೆ.ಫಾತಿಮತ್ ರುಫೈದ 551ದ್ವಿತೀಯ ,ಹಫ್ನಾ 549 ತೃತೀಯ,ಮುಹಮ್ಮದ್ ಸಿನಾನ್ 542,ಮುಹಮ್ಮದ್ ರಿಹಾಲ್ 522 ಹಾಗೂ ಅಲ್ಫಾ 477 ಅಂಕಗಳನ್ನು ಪಡೆಯುವ ಮೂಲಕ ಎಲ್ಲಾ ವಿಧ್ಯಾರ್ಥಿಗಳು ಟಾಪ್ ಗ್ರೇಡ್‌ ನಲ್ಲಿ ಪಾಸಾಗುವ ಮೂಲಕ ವಿಶಿಷ್ಟ ಸಾಧನೆ ಮಾಡಿದ್ದಾರೆ.
ಅದೇ ರೀತಿಯಲ್ಲಿ
5 ನೇ ತರಗತಿಯಲ್ಲಿ ಮದ್ರಸಕ್ಕೆ ಫಾತಿಮತ್ ರಿಫಾ ಪ್ರಥಮ ಸ್ಥಾನ,ಮುಹಮ್ಮದ್ ತೌಫೀಕ್ ದ್ವಿತೀಯ ಸ್ಥಾನ ಹಾಗೂ ಮುಹಮ್ಮದ್ ಇನಾಝ್ ತೃತೀಯ ಸ್ಥಾನ ಗಳಿಸಿ ಎಲ್ಲಾರು ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ.