ಮಾ.28 – 30: ಇತಿಹಾಸ ಪ್ರಸಿದ್ಧ ಕಲ್ಲುಗುಂಡಿ ಶ್ರೀ ಮಹಾವಿಷ್ಣುಮೂರ್ತಿ ದೈವದ ಒತ್ತೆಕೋಲ

0

ಪಂಜುರ್ಲಿ – ಕಲ್ಲುರ್ಟಿ ಹಾಗೂ ಗುಳಿಗ ದೈವದ ಸಮ್ಮಾನ

ದ.ಕ. ಸಂಪಾಜೆ ಗ್ರಾಮದ ಇತಿಹಾಸ ಪ್ರಸಿದ್ಧ ಕಲ್ಲುಗುಂಡಿ ಶ್ರೀ ಮಹಾವಿಷ್ಣುಮೂರ್ತಿ ದೈವಸ್ಥಾನದಲ್ಲಿ ಶ್ರೀ ಮಹಾವಿಷ್ಣುಮೂರ್ತಿ ದೈವದ ಒತ್ತೆಕೋಲ ಹಾಗೂ ಪಂಜುರ್ಲಿ – ಕಲ್ಲುರ್ಟಿ ಮತ್ತು ಗುಳಿಗ ದೈವಗಳ ಸಮ್ಮಾನವು ಮಾ.28ರಿಂದ 30ರವರೆಗೆ ಜರುಗಲಿದೆ.

ಮಾ.27ರಂದು ಬೆಳಿಗ್ಗೆ ದೈವಸ್ಥಾನದ ಸನ್ನಿಧಿಯಲ್ಲಿ ಗಣಹೋಮ ನಡೆಯಲಿದೆ. ಮಾ.28ರಂದು ರಾತ್ರಿ ಶ್ರೀ ಮಹಾವಿಷ್ಣುಮೂರ್ತಿ ದೈವಸ್ಥಾನದಿಂದ ಭಂಡಾರ ಹೊರಡುವುದು. ಬಳಿಕ ಮೇಲೇರಿಗೆ ಅಗ್ನಿಸ್ಪರ್ಶ, ರಾತ್ರಿ ಶ್ರೀ ವಿಷ್ಣುಮೂರ್ತಿ ದೈವದ ಕುಳ್ಚಾಟ ನಡೆಯಲಿದೆ. ರಾತ್ರಿ ರಾಜ್ಯದ ಸರ್ವಶ್ರೇಷ್ಠ ಕಲಾವಿದರ ಕೂಡುವಿಕೆಯಿಂದ ಸುಳ್ಯದ ಎ ಟು ಝೆಡ್ ಈವೆಂಟ್ಸ್ ಎಂಡ್ ಮ್ಯಾನೇಜ್ಮೆಂಟ್ ಮುಂದಾಳತ್ವದಲ್ಲಿ ವಿನೂತನ ಕಾರ್ಯಕ್ರಮ ಕಲ್ಲುಗುಂಡಿ ಕಲರವ ಜರುಗಲಿದೆ

ಮಾ.29ರಂದು ಬೆಳಿಗ್ಗೆ ಶ್ರೀ ಮಹಾವಿಷ್ಣುಮೂರ್ತಿ ದೈವದ ಅಗ್ನಿಪ್ರವೇಶ, ಪ್ರಸಾದ ವಿತರಣೆ, ಮಾರಿಕಳ ಪ್ರವೇಶ, ಹರಿಕೆ ಒಪ್ಪಿಸುವ ಕಾರ್ಯಕ್ರಮವು ಜರುಗಲಿದೆ.

ಮಾ.30ರಂದು ಮಧ್ಯಾಹ್ನ ಪಂಜುರ್ಲಿ ಹಾಗೂ ಕಲ್ಲುರ್ಟಿ ಮತ್ತು ಗುಳಿಗ ದೈವಗಳಿಗೆ ಸಮ್ಮಾನ ನಡೆಯಲಿದೆ.