ತೊಡಿಕಾನ ಗ್ರಾಮದ ಕುತ್ತಮೊಟ್ಟೆ ಕುಟುಂಬದ ಧರ್ಮದೈವ ಶ್ರೀ ರುದ್ರಚಾಮುಂಡಿ, ಶ್ರೀ ವಿಷ್ಣುಮೂರ್ತಿ , ಶ್ರೀ ಪಾಲಿಸ್ ರಾಯ ಮತ್ತು ಪರಿವಾರ ಸಾನಿಧ್ಯಗಳ ಪುನ: ಪ್ರತಿಷ್ಠಾ ಬ್ರಹ್ಮಕಲಶೋತ್ಸವು ಮಾ.26ರಿಂದ 28ರವರೆಗೆ ಜರುಗಲಿದೆ.
ಮಾ.26ರಂದು ಬೆಳಿಗ್ಗೆ ತಂತ್ರಿಗಳ ಆಗಮನ, ದೇವತಾ ಪ್ರಾರ್ಥನೆ, ಸ್ವಸ್ತಿ ಪುಣ್ಯಾಹ, ಗಣಪತಿ ಹೋಮ, ಖನನಾದಿ ಸಪ್ತಶುದ್ಧಿ, ಸಂಜೆ ವಾಸ್ತುಪೂಜೆ, ರಾಕ್ಷೋಘ್ನಹೋಮ, ವಾಸ್ತುಹೋಮ, ವಾಸ್ತುಬಲಿ ನಡೆಯಲಿದೆ.
ಮಾ.27ರಂದು ಬೆಳಿಗ್ಗೆ ಗಣಪತಿ ಹೋಮ, ಅನುಜ್ಞಾ ಕಲಶ, ಜೀವಕಲಶ ಪೂಜೆ, ಶಯ್ಯಾ ಪೂಜೆ, ನಾಗಸನ್ನಿಧಿಯಲ್ಲಿ ನವಕ ಕಲಶಾಭಿಷೇಕ, ತಂಬಿಲ, ಆಶ್ಲೇಷ ಬಲಿ, ಸಂಜೆ ದುರ್ಗಾಪೂಜೆ, ಕಲಶಪೂಜೆ, ಅಧಿವಾಸ ಹೋಮ, ಅಧಿವಾಸ ನಡೆಯಲಿದೆ.
ಮಾ.28ರಂದು ಬೆಳಿಗ್ಗೆ ಗಣಪತಿ ಹೋಮ, ಪರಿವಾರ ದೈವಗಳ ಕಲಶಪೂಜೆ, ಮಿಥುಲ ಲಗ್ನದಲ್ಲಿ ಶ್ರೀ ದೈವಗಳ ಪೀಠ ಪ್ರತಿಷ್ಠೆ, ಬ್ರಹ್ಮಕಲಶಾಭಿಷೇಕ, ತಂಬಿಲ, ನಿತ್ಯನಿಯಮ ನಿಶ್ಚಯ, ಪ್ರಸಾದ ವಿತರಣೆ, ಮಧ್ಯಾಹ್ನ ಅನ್ನಸಂತರ್ಪಣೆ ಜರುಗಲಿದೆ.