ಬಳ್ಪ ಗ್ರಾಮದ ಗ್ರಾಮದೈವ ಕುಮನಪಾಳ್ಯ ಶ್ರೀ ಶಿರಾಡಿ ರಾಜನ್ ದೈವ, ಉಳ್ಳಾಕುಲು ಮತ್ತು ಪರಿವಾರ ದೈವಗಳ ನೇಮೋತ್ಸವ ಮಾ. 23ರಿಂದ ಮಾ. 24ರ ವರೆಗೆ ಜರಗಿತು.
ಮಾ. 23ರಂದು ಶ್ರೀ ದುರ್ಗಾ ಧನ್ವಂತರಿ ಮಹಾವಿಷ್ಣು ದೇವಸ್ಥಾನ ವಿಷ್ಣುಮಂಗಲದಲ್ಲಿ ಗಣಪತಿ ಹವನ, ಸತ್ಯನಾರಾಯಣ ಪೂಜೆ, ಮಧ್ಯಾಹ್ನ ದೈವಗಳಿಗೆ ವಿಶೇಷ ತಂಬಿಲ ಬಳಿಕ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು. ಸಂಜೆ ದೈವಗಳ ಭಂಡಾರ ತೆಗೆದು ರಾತ್ರಿ ಶ್ರೀ ಉಳ್ಳಾಕುಲು, ಕುಮಾರ, ಮದಿಮಾಳು ದೈವಗಳ ನೇಮೋತ್ಸವ, ಅನ್ನಸಂತರ್ಪಣೆ ನಡೆಯಿತು. ಬಳಿಕ ವ್ಯಾಘ್ರ ಚಾಮುಂಡಿ, ರುದ್ರಚಾಮುಂಡಿ, ವರ್ಣಾರ ಪಂಜುರ್ಲಿ, ಮಲೆ ಚಾಮುಂಡಿ, ಪಂಜುರ್ಲಿ, ಕಲ್ಲುರ್ಟಿ ದೈವಗಳ ನೇಮೋತ್ಸವ, ಮಾ.24ರಂದು ಬೆಳಿಗ್ಗೆ ಪುರುಷರಾಯ, ಬೇಡವ ದೈವಗಳ ನೇಮೋತ್ಸವ, ಶ್ರೀ ಶೀರಾಡಿ ರಾಜನ್ ದೈವದ ನೇಮೋತ್ಸವ, ಹರಿಕೆ ಕಾಣಿಕೆ, ಪ್ರಸಾದ ವಿತರಣೆ, ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು. ಮಾರಿಕಳಕ್ಕೆ ಹೋಗುವುದು ನಡೆಯಿತು. ಮಾ. 30ರಂದು ದೈವಗಳಿಗೆ ತಂಬಿಲ, ವಾರ್ಷಿಕ ಮಹಾಸಭೆ ನಡೆಯಲಿದೆ. ನೇಮೋತ್ಸವ ಸಮಿತಿಯ ಅಧ್ಯಕ್ಷ ರಾಮಚಂದ್ರ ಎಂರ್ಬಿಲ, ಪ್ರಧಾನ ಕಾರ್ಯದರ್ಶಿ ಶಿವಪ್ರಸಾದ್ ಕೊಠಾರಿ, ಖಜಾಂಜಿ ಮಹೇಶ್ ಸೂಂತಾರು, ಉಪಾಧ್ಯಕ್ಷರ ಭಾಸ್ಕರ ಕೊರಪ್ಪಣೆ, ಜತೆಕಾರ್ಯದರ್ಶಿ ಹೊನ್ನಪ್ಪ ಎಂರ್ಬಿಲ ಸೇರಿದಂತೆ ಸಮಿತಿಯ ಪದಾಧಿಕಾರಿಗಳು, ಸದಸ್ಯರು, ಭಕ್ತಾದಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.