ಡಾ. ರಾಘವೇಂದ್ರ ಸಾಗರ್ ಅವರ ಮಾರ್ಗದರ್ಶನದಲ್ಲಿ ಭೌತಶಾಸ್ತ್ರದ ‘ಇಲೆಕ್ಟ್ರೋಕೆಮಿಕಲ್ ಸ್ಟಡಿ ಒಫ್ ಸಮ್ ಕೋಬಲ್ಟ್ ಒಕ್ಸಾಯ್ಡ್ ಬೇಸ್ಡ್ ಸ್ಪಿನಲ್ಸ್ ಫಾರ್ ಸೂಪರ್ ಕೆಪ್ಯಾಸಿಟರ್ ಅಪ್ಲಿಕೇಷನ್ಸ್’ ವಿಷಯದ ಕುರಿತು ಶ್ರೀಮತಿ ಸಮತಾ ದೀಪಕ್ ಸರಳಾಯರವರು ಮಂಡಿಸಿದ ಮಹಾಪ್ರಬಂಧಕ್ಕೆ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವು ಡಾಕ್ಟರೇಟ್ ಪದವಿಯನ್ನು ನೀಡಿ ಗೌರವಿಸಿದೆ.
ಇವರು ಸುಳ್ಯದ ನಿವೃತ್ತ ಬಿ.ಎಸ್.ಎನ್.ಎಲ್. ಉದ್ಯೋಗಿಗಳಾದ ಶ್ರೀಮತಿ ಸುಮಂಗಲ ಮತ್ತು ಕವಿ ನಾರಾಯಣ ಕೇಳತ್ತಾಯ ದಂಪತಿಗಳ ಪುತ್ರಿ ಹಾಗೂ ಉಡುಪಿಯ ದೀಪಕ್ ಸರಳಾಯ ಇವರ ಪತ್ನಿ.