ಕನಕಮಜಲು: ಮತದಾನ ಬಹಿಷ್ಕಾರ ಬ್ಯಾನರ್ ಅಳವಡಿಕೆ ಸ್ಥಳಕ್ಕೆ ತಹಶಿಲ್ದಾರ್ ಭೇಟಿ – ಬ್ಯಾನರ್ ತೆರವು

0

ಕನಕಮಜಲು ಗ್ರಾಮದ ನೆಡಿಲು ಎಂಬಲ್ಲಿ ಡಿ‌‌.ಸಿ. ಮನ್ನಾ ಜಾಗವನ್ನು ಅಂಬೇಡ್ಕರ್ ಭವನ ನಿರ್ಮಾಣಕ್ಕೆ ನೀಡದೇ, ಸಾಮಾಜಿಕ ಅರಣ್ಯಕ್ಕೆ ಮೀಸರಿಸಿರುವುದನ್ನು ವಿರೋಧಿಸಿ, ಪರಿಶಿಷ್ಟ ಜಾತಿ ಕಾಲನಿ ನಿವಾಸಿಗಳು ಕನಕಮಜಲು ಮೊಗೇರ ಗ್ರಾಮಸಮಿತಿ ವತಿಯಿಂದ ಚುನಾವಣಾ ಬಹಿಷ್ಕಾರದ ಬ್ಯಾನರನ್ನು ಮಾ.24ರಂದು ನೆಡಿಲು ಎಂಬಲ್ಲಿ ಅಳವಡಿಸಿದ್ದರು.

ಈ ವಿಷಯ ಸುಳ್ಯ ತಹಶಿಲ್ದಾರ್ ಮಂಜುನಾಥ್ ಅವರ ಗಮನಕ್ಕೆ ಬಂದ ಹಿನ್ನೆಲೆ ಅವರು ಮಾ.25ರಂದು ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಸ್ಥಳೀಯ ನಿವಾಸಿಗಳೊಂದಿಗೆ ಮಾತುಕತೆ ನಡೆಸಿ, ಬ್ಯಾನರ್ ತೆರವುಗೊಳಿಸಿರುವುದಾಗಿ ತಿಳಿದುಬಂದಿದೆ.

ಈ ಸಂದರ್ಭದಲ್ಲಿ ಸಾಮಾಜಿಕ ಅರಣ್ಯದ ರೇಂಜರ್ ಶೈಲಜ, ಕಂದಾಯ ನಿರೀಕ್ಷಕ ಅವಿನ್ ರಂಗತ್ ಮಲೆ, ಕನಕಮಜಲು ಪ್ರಭಾರ ಗ್ರಾಮ ಆಡಳಿತಾಧಿಕಾರಿ ಶಾಹಿನ, ಕನಕಮಜಲು ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಸರೋಜಿನಿ ಉಪಸ್ಥಿತರಿದ್ದರು.