ಪೆರಾಜೆ ಶ್ರೀ ಶಾಸ್ತಾವು ದೇವಸ್ಥಾನದಲ್ಲಿ ಜಾತ್ರೋತ್ಸವ : ದೇವರ ನೃತ್ಯಬಲಿ

0

ಪೆರಾಜೆ ಶ್ರೀ ಶಾಸ್ತಾವು ದೇವಸ್ಥಾನದಲ್ಲಿ ಕಾಲಾವಧಿ ಜಾತ್ರೋತ್ಸವವು ಮಾ.26ರಂದು ಪ್ರಾರಂಭಗೊಂಡಿದ್ದು, ದೇವರ ನೃತ್ಯ ಬಲಿ ನಡೆಯಿತು.

ಬೆಳಿಗ್ಗೆ ಕಲಶೋತ್ಸವ, ಮಹಾಪೂಜೆ, ಮಹಾಸಮಾರಾಧನೆ, ಸಂಜೆ ಶ್ರೀ ಉಳ್ಳಾಕುಳ ಮಾಡಾದ ಅರಮನೆಯಿಂದ ಭಂಡಾರ ತರಲಾಯಿತು. ರಾತ್ರಿ ದೇವರ ಬಲಿ ಹೊರಟು ಭೂತಬಲಿ, ನೃತ್ಯಬಲಿ, ಕಟ್ಟೆಪೂಜೆ ಜರುಗಿತು.

ಸಾಂಸ್ಕೃತಿಕ ಕಾರ್ಯಕ್ರಮದ ಪ್ರಯುಕ್ತ ಅಡೂರಿನ ಪಾಂಡಿಯವರಿಂದ ವಿಶೇಷ ಆಕರ್ಷಣೆಯ ಚಿಲಂಗ ಚೆಂಡೆಮೇಳ ಜರುಗಿತು.

ಈ ಸಂದರ್ಭದಲ್ಲಿ ದೇವಸ್ಥಾನದ ಮೊಕ್ತೇಸರ ಜಿತೇಂದ್ರ ನಿಡ್ಯಮಲೆ, ಕಾರ್ಯದರ್ಶಿ ತೇಜಪ್ರಸಾದ್ ಅಮಚೂರು, ದೇವತಕ್ಕ ರಾಜಗೋಪಾಲ ರಾಮಕಜೆ, ಸೇರಿದಂತೆ ತಕ್ಕಮುಖ್ಯಸ್ಥರುಗಳು ಹಾಗೂ ಪದಾಧಿಕಾರಿಗಳು ಮತ್ತು ಭಕ್ತಾದಿಗಳು ಉಪಸ್ಥಿತರಿದ್ದರು.