Home ಪ್ರಚಲಿತ ಸುದ್ದಿ ಸುಬ್ರಹ್ಮಣ್ಯ: ಕೆ .ಎಸ್ .ಎಸ್ ಕಾಲೇಜಿನ ಹಿರಿಯ ವಿದ್ಯಾರ್ಥಿ ಸಂಘದ ಪದಗ್ರಹಣ

ಸುಬ್ರಹ್ಮಣ್ಯ: ಕೆ .ಎಸ್ .ಎಸ್ ಕಾಲೇಜಿನ ಹಿರಿಯ ವಿದ್ಯಾರ್ಥಿ ಸಂಘದ ಪದಗ್ರಹಣ

0

ಸುಬ್ರಹ್ಮಣ್ಯದ ಕೆ. ಎಸ್. ಎಸ್ ಕಾಲೇಜಿನ ಹಿರಿಯ ವಿದ್ಯಾರ್ಥಿ ಸಂಘದ ಪದಗ್ರಹಣ ಸಮಾರಂಭ ಮಾ.25 ರಂದು ನಡೆಯಿತು.

ಸಮಾರಂಭದ ಅಧ್ಯಕ್ಷತೆಯನ್ನು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಡಾl ನಿಂಗಯ್ಯ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಮಂಡ್ಯ ಜಿಲ್ಲಾ ನ್ಯಾಯಾಧೀಶ ವಿಜಯಕುಮಾರ್ ರೈ ಉಪಸ್ಥಿತರಿದ್ದರು. ಸಮಾರಂಭದಲ್ಲಿ ಇತ್ತೀಚೆಗೆ ಲೆಫ್ಟಿನೆಂಟ್ ಆಗಿ ನೇಮಕವಾದ ಅಜಿತೇಶ್ ಪಿ ಎಸ್ ಅವರನ್ನು ಗೌರವಹಿಸಲಾಯಿತು.

ವೇದಿಕೆಯಲ್ಲಿ ಪ್ರಾಂಶುಪಾಲ ಡಾ. ದಿನೇಶ್ ಪಿ.ಟಿ, ಕೋಆರ್ಡಿನೇಟರ್ ಲತಾ ಬಿ.ಟಿ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಗಣೇಶ್ ಪ್ರಸಾದ್, ಉಪಾಧ್ಯಕ್ಷರುಗಳಾದ ಭಾರತಿ ದಿನೇಶ್, ದೀಪಕ್ ನಂಬಿಯಾರ್, ಕಾರ್ಯದರ್ಶಿ ತೇಜಸ್ ಕಳಿಗೆ, ಜೊತೆ ಕಾರ್ಯದರ್ಶಿ ಪವನ್ ಎಂ ಡಿ, ದಯಾನಂದ ಯು, ಕೋಶಾಧಿಕಾರಿ ವಿಮಲಾ ರಂಗಯ್ಯ ಲೋಕೇಶ್ ಬಿ.ಎನ್, ಸದಸ್ಯರುಗಳಾದ ಚಂದ್ರಶೇಖರ, ಗೋವರ್ಧನ , ದಿನೇಶ್ , ಉಮೇಶ್ , ಪದ್ಮ ಕುಮಾರ್, ಲತಾಶ್ರೀ, ಸುಹಾಸ್, ಪ್ರದೀಪ್, ಕೋ ಆರ್ಡಿನೇಟರ್ ಶ್ರೀಲತಾ ಕಮಿಲ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿಮಲ ರಂಗಯ್ಯ ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರೆ, ತೇಜಸ್ ಕಳಿಗೆ ವಂದಿಸಿದರು, ಪುಷ್ಪಾ ಡಿ ಕಾರ್ಯಕ್ರಮ ನಿರೂಪಿಸಿದರು.

NO COMMENTS

error: Content is protected !!
Breaking