ಪುಟಾಣಿ ವಂಶಿ ಎಲ್. ಮಾದನಮನೆ ಈಕೆಯ ಚಿಕಿತ್ಸೆಗೆ ಬೇಕಾಗಿದೆ ನೆರವು
ಏನೆಕಲ್ಲು ಗ್ರಾಮದ ಮಾದನ ಮನೆ ಲಕ್ಷ್ಮಣ ಗೌಡ ಮತ್ತು ಶ್ರೀಮತಿ ಪದ್ಮಿನಿ ದಂಪತಿಗಳ ನಾಲ್ಕು ವರ್ಷದ ಪುತ್ರಿ ವಂಶಿ ಎಲ್. ಏನೆಕಲ್ಲು ಅಂಗನವಾಡಿ ಕೇಂದ್ರದ ವಿದ್ಯಾರ್ಥಿನಿ. ಆಕೆ ಕೆಲವು ದಿನಗಳ ಹಿಂದಷ್ಟೇ ಅನಾರೋಗ್ಯಕ್ಕೆ ಒಳಗಾಗಿ ಚಿಕಿತ್ಸೆಗಾಗಿ ಆಸ್ಪತ್ರೆಗೆ ತೆರಳಿದ್ದು, ವೈದ್ಯರು ಪರೀಕ್ಷಿಸಿದಾಗ ಆಕೆ ರಕ್ತ ಕ್ಯಾನ್ಸರ್ ಗೆ ಒಳಗಾಗಿರುವುದಾಗಿ ತಿಳಿಸಿದ್ದಾರೆ.
ವರುಷಗಳ ಹಿಂದೆ ಲಕ್ಷ್ಮಣ ಗೌಡರು ಬೈಕ್ ನಲ್ಲಿ ಬಿದ್ದು ಕಾಲು ನೋವುನಿಂದ ಯಾವುದೇ ಕೆಲಸಕ್ಕೆ ಹೋಗದೆ ಮತ್ತಷ್ಟು ಸಂಕಷ್ಟದಲ್ಲಿದ್ದು ,ತೀರಾ ಅರ್ಥಿಕ ಸಂಕಷ್ಟದಲ್ಲಿರುವ ಬಡ ಕುಟುಂಬಕ್ಕೆ ಈ ವಿಚಾರ ತಿಳಿದು ಕಂಗೆಟ್ಟಿದ್ದು ದಿಕ್ಕು ತೋಚದಂತಾಗಿದೆ. ಪುಟಾಣಿ ವಂಶಿ ಮಂಗಳೂರಿನ ಅತ್ತಾವರ ಕೆಎಂಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಚಿಕಿತ್ಸೆಗೆ ಸುಮಾರು ರೂ.15 ಲಕ್ಷ ಕ್ಕೂ ಮಿಕ್ಕಿ ವೆಚ್ಚ ತಗಲ ಬಹುದು ಎಂದು ವೈದ್ಯರು ತಿಳಿಸಿದ್ದಾರೆ.
ಆಕೆಯ ಚಿಕಿತ್ಸೆ ವೆಚ್ಚ ಭರಿಸಲು ತಮ್ಮ ಕೈಲಾದ ಆರ್ಥಿಕ ನೆರವು ನೀಡಲು ಮನೆಯವರು ವಿನಂತಿಸಿದ್ದಾರೆ.
Name : Venkatesh k
Bank Account Number: 01782210007409
IFSC Code: CNRB0010178
ಹೆಚ್ಚಿನ ಮಾಹಿತಿಗೆ ವೆಂಕಟೇಶ್ ಕೆ. ಪಂಜ (ಮಗುವಿನ ಮಾವ) 9972510393 ಸಂಪರ್ಕಿಸಬಹುದು.