ಎ.13 – 19: ಸುಳ್ಯಸೀಮೆ ಮಹತೋಭಾರ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇಗುಲದಲ್ಲಿ ಕಾಲಾವಧಿ ಜಾತ್ರೋತ್ಸವ

0

ಭಜನಾ ಸೇವೆ – ಯಕ್ಷಗಾನ ಬಯಲಾಟ – ನಾಟಕ – ಭಕ್ತಿ ರಸಮಂಜರಿ ನೃತ್ಯ ವೈವಿಧ್ಯ

ಸುಳ್ಯಸೀಮೆ ಮಹತೋಭಾರ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇಗುಲದಲ್ಲಿ ಪೂರ್ವಸಂಪ್ರದಾಯದಂತೆ ಕಾಲಾವಧಿ ಜಾತ್ರೋತ್ಸವವು ಎ.13ರಿಂದ ಎ.19ರವರೆಗೆ ವಿವಿಧ ವೈದಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.

ಎ.13ರಂದು ಬೆಳಿಗ್ಗೆ ಉಗ್ರಾಣ ತುಂಬಿಸುವುದು,ಧ್ವಜಾರೋಹಣ ನಡೆಯಲಿದ್ದು, ಬಳಿಕ ಶ್ರೀ ಮಲ್ಲಿಕಾರ್ಜುನ ಭಜನಾ ಸಂಘದ ವತಿಯಿಂದ ಭಜನಾ ಸೇವೆ ನಡೆಯಲಿದೆ.
ಎ.14ರಂದು ಬೆಳಿಗ್ಗೆ ದೇಗುಲದಲ್ಲಿ ವಿಷುಕಣಿ, ಶತರುದ್ರಾಭಿಷೇಕ, ಅರಂಬೂರಿ‌ನ ಕಾಂಚಿ ಕಾಮಕೋಟಿ ವೇದ ವಿದ್ಯಾಲಯ ವಿದ್ಯಾರ್ಥಿಗಳಿಂದ ವೇದ ಪಾರಾಯಣ ನಡೆಯಲಿದೆ.ರಾತ್ರಿ ಹನುಮಗಿರಿ ಶ್ರೀ ಕೋದಂಡರಾಮ ಕೃಪಾಪೋಷಿತ ಯಕ್ಷಗಾನ ಮಂಡಳಿಯವರಿಂದ ಇಂದ್ರಪ್ರಸ್ಥ ಯಕ್ಷಗಾನ ಬಯಲಾಟ ಪ್ರದರ್ಶನಗೊಳ್ಳಲಿದೆ.

ಎ.15ರಂದು ಸಂಜೆ ತೋಟಂಪಾಡಿ ಶ್ರೀ ಉಳ್ಳಾಕುಳು ದೈವದ ಭಂಡಾರ ಬರುವುದು. , ರಾತ್ರಿ ಉತ್ಸವ ಬಲಿ ಹೊರಡುವುದು. ಸಾಂಸ್ಕೃತಿಕ ಕಾರ್ಯಕ್ರಮದ ಪ್ರಯುಕ್ತ ಅಪ್ಪು ಮೆಲೋಡೀಸ್ ಕುದ್ರೆಪಾಯದವರಿಂದ ಭಕ್ತಿ ರಸಮಂಜರಿ ನಡೆಯಲಿದೆ.

ಎ.16ರಂದು ಬೆಳಿಗ್ಗೆ ಸಣ್ಣದರ್ಶನ ಬಲಿ, ರಾತ್ರಿ ನಡುಬೆಳಗು ಉತ್ಸವ ಜರುಗಲಿದೆ. ಸಾಂಸ್ಕೃತಿಕ ಕಾರ್ಯಕ್ರಮದ ಪ್ರಯುಕ್ತ ಸುಳ್ಯದ ಬ್ರಹ್ಮಕುಮಾರಿ ಈಶ್ವರೀಯ ವಿದ್ಯಾಲಯದವರಿಂದ ರೂಪಕ ಅಮರನಾಥ ಅಮರಕಥೆ ನಡೆಯಲಿದೆ.
ಎ.17ರಂದು ಬೆಳಿಗ್ಗೆ ಉತ್ಸವ ಬಲಿ, ರಾತ್ರಿ ದೊಡ್ಡಬೆಳಗು ಉತ್ಸವ ನಡೆಯಲಿದ್ದು, ಸಾಂಸ್ಕೃತಿಕ ಕಾರ್ಯಕ್ರಮದ ಪ್ರಯುಕ್ತ ಸವಿತಾ ಕಿರಣ್ ಕಾಡುಪಂಜ ನಿರ್ದೇಶನದಲ್ಲಿ ನೃತ್ಯ ವೈವಿಧ್ಯ ನಡೆಯಲಿದೆ.

. ಎ.18ರಂದು ಬೆಳಿಗ್ಗೆ ದೊಡ್ಡದರ್ಶನ ಬಲಿ, ಬಟ್ಟಲುಕಾಣಿಕೆ, ರಾತ್ರಿ ಬಲಿ ಹೊರಟು ವಾಲಸಿರಿ ಉತ್ಸವ ನಡೆಯಲಿದ್ದು, ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಕಲ್ಲುಗುಂಡಿಯ ನಟರಾಜ ನೃತ್ಯ ನಿಕೇತನ ಅವರಿಂದ ಭರತ ನೃತ್ಯ ವೈಭವ ಜರುಗಲಿದೆ.

ಎ.19ರಂದು ಬೆಳಿಗ್ಗೆ ಆರಾಟ ಬಾಗಿಲು ತೆರೆಯುವುದು, ಸಾಯಂಕಾಲ ಉತ್ಸವ ಬಲಿ, ಅವಭೃತ ಸ್ನಾನವಾಗಿ ಬಂದು ದರ್ಶನಬಲಿ, ಬಟ್ಟಲುಕಾಣಿಕೆ, ಧ್ವಜಾವರೋಹಣ ನಡೆಯಲಿದೆ.
ರಾತ್ರಿ ವಿಜಯಕುಮಾರ್ ಕೊಡಿಯಾಲಬೈಲು ನಿರ್ದೇಶನದ ಸ್ವರಾಜ್ ಶೆಟ್ಟಿ ಅಭಿನಯದ ವಿಭಿನ್ನ ಶೈಲಿಯ ತುಳುನಾಟಕ ಶಿವದೂತೆ ಗುಳಿಗೆ ಪ್ರದರ್ಶನಗೊಳ್ಳಲಿದೆ.

ಎ.20ರಂದು ಮಧ್ಯಾಹ್ನ ಸಂಪ್ರೋಕ್ಷಣೆ, ಮಂತ್ರಾಕ್ಷತೆಯೊಂದಿಗೆ ಕಾಲಾವಧಿ ಜಾತ್ರೋತ್ಸವವು ಸಂಪನ್ನಗೊಳ್ಳಲಿದೆ.