ಕಲ್ಲಪ್ಪಳ್ಳಿ ಹಳೆ ಅಂಗನವಾಡಿ ಕಟ್ಟಡದಲ್ಲಿ ಪಕ್ಷದ ಕಚೇರಿ ತೆರೆದ ಆರೋಪ-

0

ಸ್ಥಳಕ್ಕಾಗಮಿಸಿ ಪಕ್ಷದ ಪೋಸ್ಟರ್ ತೆರವುಗೊಳಿಸುವಂತೆ ಸೂಚಿಸಿ ಬೀಗ ಹಾಕಿದ ಚುನಾವಣಾಧಿಕಾರಿಗಳು

ಕರ್ನಾಟಕ ಕೇರಳ ಗಡಿ ಪ್ರದೇಶದ ಪನತ್ತಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಲ್ಲಪಳ್ಳಿ ಎಂಬಲ್ಲಿ
ಹಳೆ ಅಂಗನವಾಡಿ ಕಟ್ಟಡದಲ್ಲಿ ಪಕ್ಷದ ಚುನಾವಣಾ ಕಚೇರಿ ತೆರದಿರುವ ಬಗ್ಗೆ ದೂರು ನೀಡಿದ ಪ್ರಕರಣದ ಬಗ್ಗೆ ಸ್ಥಳಕ್ಕೆ ಆಗಮಿಸಿದ ಚುನಾವಣಾಧಿಕಾರಿಗಳು‌ ಪಕ್ಷದ ಚಿಹ್ನೆ ಇರುವ ಪೋಸ್ಟರ್ ಹಾಗೂ ಅಭ್ಯರ್ಥಿಯ ಭಾವಚಿತ್ರವಿರುವ ಪೋಸ್ಟರ್ ತೆರವುಗೊಳಿಸಿ ಕೊಠಡಿಗೆ ಬೀಗ ಜಡಿದ ಘಟನೆ ವರದಿಯಾಗಿದೆ.

ಹಲವಾರು ವರ್ಷಗಳ ಹಿಂದೆ ಗ್ರಾಮೀಣ ಪ್ರದೇಶವಾಗಿರುವ ಕಲ್ಲಪ್ಪಳ್ಳಿಯ ಆಸು ಪಾಸಿನ ಮಕ್ಕಳಿಗೆ ಅಂಗನವಾಡಿ ಕೇಂದ್ರದ ಅವಶ್ಯಕತೆಗೆ ಸ್ಪಂದಿಸಿ ಸ್ಥಳೀಯರೊಬ್ಬರು‌ದಾನವಾಗಿ ನೀಡಿದ ಜಾಗದಲ್ಲಿ ಪನತ್ತಡಿ ಪಂಚಾಯತ್ ಅನುದಾನದಲ್ಲಿ ಕಟ್ಟಡ ನಿರ್ಮಿಸಲಾಗಿತ್ತು.

ಕಳೆದ 8 ವರ್ಷಗಳ ಹಿಂದೆ ಮಕ್ಕಳಅನೂಕೂಲತೆಗನುಗುಣವಾಗಿ ಅಲ್ಲಿಂದ ಕಿರಿಯ ಪ್ರಾಥಮಿಕ ಶಾಲೆ ಇರುವ ಪ್ರದೇಶಕ್ಕೆ ನೂತನವಾಗಿ ನಿರ್ಮಿಸಲಾದ ಕಟ್ಟಡಕ್ಕೆ ಅಂಗನವಾಡಿಯನ್ನು ಸ್ಥಳಾಂತರಿಸಲಾಯಿತು. ಪಂಚಾಯತ್ ವತಿಯಿಂದ ನಿರ್ಮಿಸಿದ್ದ ನಿರುಪಯುಕ್ತ ಹಳೆಯ ಅಂಗನವಾಡಿ ಕಟ್ಟಡದಲ್ಲಿ ಪಕ್ಷದ ಚುನಾವಣಾ ಕಚೇರಿಯನ್ನು ಎ.3 ರಂದು ಸಿ.ಪಿ.ಐ.ಎಂ.ಪಕ್ಷದ ಮುಖಂಡ ಎಂ.ವಿ.ಕೃಷ್ಣ ರವರನ್ನು ಕರೆಯಿಸಿ ಉದ್ಘಾಟಿಸಲಾಗಿತ್ತು.
ಕಟ್ಟಡದ ಗೋಡೆಗಳಲ್ಲಿ ಪಕ್ಷದ ಅಭ್ಯರ್ಥಿ ಹಾಗೂ ಚಿಹ್ನೆ ಇರುವ ಪೋಸ್ಟರ್ ಅಂಟಿಸಲಾಗಿತ್ತು.


ಪಕ್ಷದ ಕಾರ್ಯಕರ್ತರು ಪಕ್ಷದ ಕುರಿತು ಸಭೆಗಳನ್ನು ನಡೆಸುತ್ತಿದ್ದರು.
ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವಿರೋಧ ವ್ಯಕ್ತಪಡಿಸಿ ಬರಹಗಳು ಹರಿಯತೊಡಗಿತು. ಈ ಬಗ್ಗೆಚುನಾವಣಾಧಿಕಾರಿಯವರಿಗೆ ಲಿಖಿತ ದೂರನ್ನು ಸ್ಥಳೀಯರು ನೀಡಿದ್ದರು.
ದೂರಿನ ಮೇರೆಗೆ
ಸ್ಥಳಕ್ಕೆ ಭೇಟಿ ನೀಡಿದ ಚುನಾವಾಣಾದಿಕಾರಿಗಳು ಕಟ್ಟಡವನ್ನು ಪರಿಶೀಲಿಸಿ ಪಕ್ಷದ ಎಲ್ಲಾ ಪೋಸ್ಟರ್ ತೆರವುಗೊಳಿಸುವಂತೆ ಸೂಚಿಸಿ, ಕೊಠಡಿಗೆ ಬೀಗ ಜಡಿದು ತೆರಳುವ ಮೂಲಕ ವಿವಾದವನ್ನು ಶಮನಗೊಳಿಸಿರುವುದಾಗಿ ತಿಳಿದು ಬಂದಿದೆ.