ಮತದಾನ ಜಾಗೃತಿಗಾಗಿ ಸುದ್ದಿ ಮತದಾರರ ಕಡೆಗೆ

0

ಐವರ್ನಾಡಿನಲ್ಲಿ ” ಸುದ್ದಿ ಚುನಾವಣಾ ಕುರುಕ್ಷೇತ್ರ “

ಅಭಿವೃದ್ಧಿ, ಹಿಂದುತ್ವ , ದೇಶದ ಕುರಿತ ಚರ್ಚೆಗೆ ವೇದಿಕೆ

ಮುಂಬರುವ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಮತದಾನ ಜಾಗೃತಿಗಾಗಿ ಸುದ್ದಿಯ ವತಿಯಿಂದ “ಚುನಾವಣಾ ಕುರುಕ್ಷೇತ್ರ ” ಎಂಬ ವಿನೂತನ ಕಾರ್ಯಕ್ರಮದ ಚಿತ್ರೀಕರಣ ಇಂದು ಐವರ್ನಾಡಿನಲ್ಲಿ ನಡೆಯಿತು.

ಬಿಜೆಪಿ, ಕಾಂಗ್ರೆಸ್ ಮುಖಂಡರು, ಸಂಘ ಸಂಸ್ಥೆಗಳ ಪ್ರತಿನಿಧಿಗಳು, ಜಾಗೃತ ಮತದಾರರು ಭಾಗವಹಿಸಿದ್ದರು. ಸುದ್ದಿ ಚಾನೆಲ್ ಮುಖ್ಯಸ್ಥ ದುರ್ಗಾಕುಮಾರ್ ನಾಯರ್ ಕೆರೆ ಅವರು ಕಾರ್ಯಕ್ರಮ ನಡೆಸಿಕೊಟ್ಟರು.

ಈ ಸಂದರ್ಭದಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಲೀಲಾವತಿ ಕುತ್ಯಾಡಿ, ಉಪಾಧ್ಯಕ್ಷ ಬಾಲಕೃಷ್ಣ ಕೀಲಾಡಿ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಚಂದ್ರಲಿಂಗಂ, ದ.ಕ.ಜಿಲ್ಲಾ ಜೇನು ವ್ಯವಸಾಯಗಾರರ ಸಹಕಾರಿ ಸಂಘದ ಅಧ್ಯಕ್ಷ ಚಂದ್ರಕೋಲ್ಚಾರ್, ಮಾಧವ ಭಟ್ ಶೃಂಗೇರಿ, ಜಯಪ್ರಕಾಶ್ ನೆಕ್ರೆಪ್ಪಾಡಿ, ಮುರಳೀಧರ ಕೊಚ್ಚಿ, ಶಿವರಾಮ ನೆಕ್ರೆಪ್ಪಾಡಿ, ಸಂಪ್ರೀತ್ ಮಿತ್ತಮೂಲೆ, ರಾಮಚಂದ್ರ ಪಲ್ಲತ್ತಡ್ಕ , ಕರುಣಾಕರ ಮಡ್ತಿಲ, ಅಶ್ವತ್ ಜಬಳೆ, ಸತೀಶ್ ಜಬಳೆ, ನಟರಾಜ್ ಸಿಕೂಪ್, ನಂದಕುಮಾರ್ ಬಾರೆತ್ತಡ್ಕ, ಪ್ರವೀಣ ಬಜಂತಡ್ಕ, ಸುಜಾತ ಪವಿತ್ರಮಜಲು, ಆಶಾ ಮಡ್ತಿಲ, ಚಂಚಲಾಕ್ಷಿ ಕತ್ಲಡ್ಕ, ಮಂಜುನಾಥ ಮಡ್ತಿಲ, ಕರುಣಾಕರ ಮಡ್ತಿಲ, ಪ್ರವೀಣ ಬಜಂತಡ್ಕ, ಕೊರಗಪ್ಪ ಕೊಯಿಲ,ಯಕ್ಷಿತ್ ಮಡ್ತಿಲ, ಪ್ರಮೋದ್,ದಯಾನಂದ ಕಟ್ಟತ್ತಾರು,ಅಜಿತ್ ಕೈವಲ್ತಡ್ಕ ಮೊದಲಾದವರು ಭಾಗವಹಿಸಿದ್ದರು.

ಕ್ಷೇತ್ರದ ಅಭಿವೃದ್ಧಿ,ರಸ್ತೆ ಅಭಿವೃದ್ಧಿ, ಭ್ರಷ್ಟಾಚಾರ ನಿರ್ಮೂಲನೆ, ರೈಲ್ವೆ ಯೋಜನೆ, ವಿದ್ಯುತ್ ಸಮಸ್ಯೆ ಸೇರಿದಂತೆ ಹಲವು ವಿಷಯಗಳು ಪ್ರಸ್ತಾಪವಾಯಿತು. ಸೌಜನ್ಯ ಪರ ಹೋರಾಟಗಾರರು ನೋಟಾ ಅಭಿಯಾನದ ಕುರಿತು ಪ್ರಸ್ತಾಪಿಸಿದರು.

ಸುದ್ದಿ ಬಿಡುಗಡೆ ಪತ್ರಿಕೆ ವರದಿಗಾರ ಗಣೇಶ್ ಕುಕ್ಕುದಡಿ, ಪ್ರಜ್ಞಾ ಎಸ್.ನಾರಾಯಣ್ ಅಚ್ರಪ್ಪಾಡಿ, ತಾಂತ್ರಿಕ ವಿಭಾಗದ ಶ್ರೀಧಾಮ ಅಡ್ಕಾರು, ಕೌಶಿಕ್ ಬಳ್ಳಕ ಸಹಕರಿಸಿದರು.

ಕಾರ್ಯಕ್ರಮದ ಕೊನೆಯಲ್ಲಿ ಐವರ್ನಾಡು ಗ್ರಾಮ ಪಂಚಾಯತ್ ವತಿಯಿಂದ ಮತದಾರರ ಜಾಗೃತಿ ಮೂಡಿಸುವ ಬಗ್ಗೆ ಮತ್ತು ಮತದಾನ ಮಾಡುವ ಬಗ್ಗೆ ಪ್ರತಿಜ್ಞಾ ವಿಧಿ ಸ್ವೀಕರಿಸಲಾಯಿತು.
ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ಯಾಮ್ ಪ್ರಸಾದ್ ರವರು ಪ್ರತಿಜ್ಞಾ ವಿಧಿ ಬೋಧಿಸಿದರು.
ಸಿಬ್ಬಂದಿ ವರ್ಗದವರು ಸಹಕರಿಸಿದರು.