ಅಂಗನವಾಡಿ ಕಟ್ಟಡದಲ್ಲಿ ಸಿಪಿಐಎಂ ಪಕ್ಷದ ಕಚೇರಿ ತೆರೆದಿದ್ದೇವೆ ಎನ್ನುವುದು ಸತ್ಯಕ್ಕೆ ದೂರವಾದ ವಿಚಾರ ಎಂದು ಕಲ್ಲಪ್ಪಳ್ಳಿಯ ಸಿಪಿಐಎಂ ಮುಖಂಡ, ತಾಲೂಕು ಪಂಚಾಯತ್ ಸದಸ್ಯ ಅರುಣ್ ರಂಗತ್ತಮಲೆ ತಿಳಿಸಿದ್ದಾರೆ.
ಕಲ್ಲಪಳ್ಳಿಯಲ್ಲಿ ಹಳೆಯ ಶಿಥಿಲಗೊಂಡ ಅಂಗನವಾಡಿ ಕಟ್ಟಡ ಇದೆ. ಲೋಕಸಭಾ ಚುನಾವಣೆ ಇರುವುದರಿಂದ ರಸ್ತೆ ಬದಿಯಲ್ಲಿ ಪಕ್ಷದ ಧ್ವಜದ ಬಂಟಿಂಗ್ಸ್ ಕಟ್ಟುತ್ತಿದ್ದೆವು. ಅದಕ್ಕೂ ಮೊದಲು ಹಳೆ ಅಂಗನವಾಡಿ ಕಟ್ಟಡದಲ್ಲಿ ನಮ್ಮ ಹುಡುಗರು ಹಗ್ಗ ಕಟ್ಟಿ ಪೋಸ್ಟರ್ ಅಂಟಿಸಿ, ಅದನ್ನು ರಸ್ತೆ ಬದಿ ಕಟ್ಟುವವರಿದ್ದರು. ಇದನ್ನು ಯಾರೋ ಫೋಟೊ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹರಿಯ ಬಿಟ್ಟು ಸತ್ಯಕ್ಕೆ ದೂರವಾದ ವಿಷಯ ಬರೆದರು. ಈ ಕುರಿತು ದೂರು ಹೋಗಿದೆ ಎಂದು ಗೊತ್ತಾಗಿ ನಾವೇ ಅಧಿಕಾರಿಗಳಿಗೆ ಸತ್ಯವಿಷಯ ತಿಳಿಸಿದ್ದೇವೆ. ಅಧಿಕಾರಿಗಳು ಸ್ಥಳಕ್ಕೆ ಬಂದಿರಲಿಲ್ಲ. ನಾವೇ ಪೋಸ್ಟರ್ ತೆಗೆದಿದ್ದೇವೆ ಎಂದು ಅರುಣ್ ರಂಗತ್ತಮಲೆ ಸುದ್ದಿಗೆ ತಿಳಿಸಿದ್ದಾರೆ.