ಎ. 9 – 10: ಬೊಳಿಯಮಜಲು ಶ್ರೀ ಶಿರಾಡಿ ರಾಜನ್ ದೇವಸ್ಥಾನದಲ್ಲಿ ಶ್ರೀ ಶಿರಾಡಿ ರಾಜನ್ ದೈವದ ನೇಮೋತ್ಸವ

0

ಸುಳ್ಯದ ಬೊಳಿಯಮಜಲಿನಲ್ಲಿರುವ ಶ್ರೀ ಶಿರಾಡಿ ರಾಜನ್ ದೈವಸ್ಥಾನದಲ್ಲಿ ಶ್ರೀ ಶಿರಾಡಿ ರಾಜನ್ ದೈವದ ನೇಮೋತ್ಸವವು ಎ.9 ಮತ್ತು 10ರಂದು ನಡೆಯಲಿದೆ.

ಎ.9ರಂದು ಬೆಳಿಗ್ಗೆ ಶ್ರೀ ಶಿರಾಡಿ ರಾಜನ್ ದೈವಗಳ ಪ್ರತಿಷ್ಠಾ ದಿನದ ಪ್ರಯುಕ್ತ ಗಣಪತಿ ಹವನ, ಶುದ್ಧೀಕಲಶ, ರಾತ್ರಿ ಭಂಡಾರ ಇಳಿಯುವುದು ಜರುಗಲಿದೆ.

ಎ.10ರಂದು ಬೆಳಿಗ್ಗೆ ಶ್ರೀ ಶಿರಾಡಿ ರಾಜನ್ ದೈವದ ನೇಮೋತ್ಸವ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಅಪರಾಹ್ನ ಶ್ರೀ ಗುಳಿಗ ದೈವದ ಕೋಲ, ಪ್ರಸಾದ ವಿತರಣೆ ಜರುಗಲಿದೆ.