ಜಟ್ಟಿಪಳ್ಳ ಬೊಳಿಯಮಜಲು ಫ್ರೆಂಡ್ಸ್ ವತಿಯಿಂದ ಮಾದರಿ ಸೌಹಾರ್ದ ಇಪ್ತಾರ್ ಕೂಟ

0

ಜಟ್ಟಿಪಳ್ಳ ಬೊಳಿಯಮಜಲಿನಲ್ಲಿ ಕಾರ್ಯಚರಿಸುತ್ತಿರುವ ಬೊಳಿಯಮಜಲು ಫ್ರೆಂಡ್ಸ್ ವತಿಯಿಂದ ಮಾದರಿ ಸೌಹಾರ್ದ ಇಪ್ತಾರ್ ಕೂಟ ಕಾರ್ಯಕ್ರಮ ಬೊಳಿಯಮಜಲಿನಲ್ಲಿ ಏ.6ರಂದು ನಡೆಯಿತು.


ಬೊಳಿಯಮಜಲು ಫ್ರೆಂಡ್ಸ್ ನ ಎಲ್ಲಾ ಹಿಂದೂ ಯುವಕ ಮಿತ್ರರು ಒಟ್ಟು ಸೇರಿ ಇಪ್ತಾರ್ ಸಮಯಕ್ಕೆ ಬೇಕಾಗುವ ಆಹಾರವನ್ನು ಸ್ವತಃ ಯುವಕರೇ ತಯಾರಿಸಿ ಜಟ್ಟಿಪಳ್ಳ ಮತ್ತು ಬೊಳಿಯಮಜಲು ಪ್ರದೇಶದಲ್ಲಿ ಇರುವ‌ ಮುಸ್ಲಿಂ ಯವಕ ಮಿತ್ರರನ್ನು ಇಪ್ತಾರ್ ಕೂಟಕ್ಕೆ ಆಹ್ವಾನಿಸಿ ಇಪ್ತಾರ್ ಕೂಟ ಏರ್ಪಡಿಸಿ ಸಮಾಜಕ್ಕೆ ಸೌಹಾರ್ದಕ್ಕೆ ಮಾದರಿ ಆಗಿದ್ದಾರೆ.


ಇಪ್ತಾರ್ ಕೂಟವನ್ನು ಬೊಳಿಯಮಜಲು ಫ್ರೆಂಡ್ಸ್ ನ ಮನು,ಜಿತ್ತು,ಕೌಶಿಕ್,ಮಹೇಶ,ಧನುಷ್,ದೇವರಾಜ್‌, ಪಾಪು,ಶ್ರಿಕಾಂತ್ ಮಹೇಶ,ಮೊದಲಾದವರು ಸಹಕರಿಸಿದರು.