ಎಲಿಮಲೆ ಜಮಾಅತ್ತಿನ ಅನಿವಾಸಿ ಯುವಕರ ಸಂಘಟನೆಯಾದ ಜಿಸಿಸಿ ಗಲ್ಫ್ ಕಮಿಟಿ ಎಲಿಮಲೆ ಇದರ ವತಿಯಿಂದ ಬ್ರಹತ್ ಇಫ್ತಾರ್ ಸಂಗಮ, ಖಬರ್ ಝಿಯಾರತ್ ಹಾಗೂ ಸನ್ಮಾನ ಸಮಾರಂಭ ಎಲಿಮಲೆ ಮದ್ರಸಾ ಸಭಾಂಗಣದಲ್ಲಿ ನಡೆಯಿತು.
ಸಂಜೆ ಖಬರ್ ಝೀಯಾರತ್ ನಡೆಸಿ ನಮ್ಮನ್ನಗಲಿದ ಖಬರ್ ನಿವಾಸಿಗಳಿಗೆ ಪ್ರಾರ್ಥನೆ ಹಾಗೂ ಖುರ್ಆನ್ ಪಾರಾಯಣ ಮಾಡಿ ಹದಿಯಾ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಸೈಯಿದ್ ಅಹಮದ್ ರಿಫಾಯಿ ತಂಙಳ್ ರವರು ದುಆಕ್ಕೆ ನೇತೃತ್ವ ನೀಡಿದರು.
ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಊರಿನ ಪ್ರತಿಭೆ ಹಸನ್ ಮುಝಮ್ಮಿಲ್ (ಬ್ಯಾಚುಲರ್ಸ್ ಆಫ್ ಫಿಝಿಯೋತೆರಫಿಸ್ಟ್) ಪದವಿಯಲ್ಲಿ ಡಾಕ್ಟರೇಟ್ ಬಿರುದುದಾರಿಯಾಗಿ ಹೊರಹೊಮ್ಮಿದ್ದು, ಇವರನ್ನು ಗುರುತಿಸಿ ಸನ್ಮಾನಿಸಲಾಯಿತು.
ಅದೇ ರೀತಿ ನೂರುಲ್ ಹುದಾ ಮದ್ರಸ ಎಲಿಮಲೆ ಇಲ್ಲಿನ ಮೂರು ವಿದ್ಯಾರ್ಥಿಗಳಾದ ಫಾತಿಮತ್ ಷಫ್ನಾಝ (7th), ಲಫ್ನಾ ಆಯಿಶ (5th) ಹಾಗೂ ಲುಫೈನಾ ಫಾತಿಮ (5th) ಪಬ್ಳಿಕ್ ಪರೀಕ್ಷೆಯಲ್ಲಿ ರ್ಯಾಂಕ್ ಗಳೊಂದಿಗೆ ತೇರ್ಗಡೆಯಾಗಿದ್ದು, ಮೂವರು ಮಕ್ಕಳನ್ನು ಗುರಿತಿಸಿ ಎಲಿಮಲೆ ಜಮಾಅತ್ ಪದಾದಿಕಾರಿಗಳ ಸಮ್ಮುಖದಲ್ಲಿ ಜಿಸಿಸಿ ವತಿಯಿಂದ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಎಲಿಮಲೆ ಜಮಾಅತ್ ಅಧ್ಯಕ್ಷರಾದ ಖಾದರ್ ಪಾಣಾಜೆ, ಜಮಾಅತ್ ಕಾರ್ಯದರ್ಶಿ ಸಿದ್ದೀಕ್ ಎಲಿಮಲೆ, ಕೋಶಾಧಿಕಾರಿ ಇಬ್ರಾಹೀಂ ಜೀರ್ಮುಕ್ಕಿ, ಜೀರ್ಮಿಕ್ಕಿ ಮಸೀದಿ ಅಧ್ಯಕ್ಷರಾದ ಜಿಎಸ್ ಅಬ್ದುಲ್ಲ, ಜೀರ್ಮುಕ್ಕಿ ಮಸೀದಿ ಕಾರ್ಯದರ್ಶಿ ಹನೀಫಿ ಜೀರ್ಮುಕ್ಕಿ, ನುಸ್ರತ್ ಅಧ್ಯಕ್ಷರಾದ ಲತೀಫ್ ಹರ್ಲಡ್ಕ, ಮಹಮೂದ್ ಸಖಾಫಿ ಎಲಿಮಲೆ, ಸೂಫಿ ಮುಸ್ಲಿಯಾರ್, ಜಮಾಅತ್ ಮಾಜಿ ಅಧ್ಯಕ್ಷರಾದ ಮೂಸಾ ಹಾಜಿ, ಎಂಕೆ ಮಹಮ್ಮದ್ ಕಂಞಿ ಮೇಲೆಬೈಲ್, ಜಿಸಿಸಿ ಪದಾದಿಕಾರಿಗಳಾದ ಹಾರಿಸ್ ಪಳ್ಳಿಕ್ಕಲ್, ಭಾತಿಷ ಕಲ್ಲುಪ್ಪಣೆ, ಹಾಗೂ ಜಮಾಅತ್ ಪದಾದಿಕಾರಿಗಳು, ನುಸ್ರತ್ ನ ಪದಾದಿಕಾರಿಗಳು ಹಾಗೂ ಊರ ಮಹನೀಯರು ಉಸ್ತಾದರುಗಳು ಉಪಸ್ಥಿತರಿದ್ದರು.