ಸುಮಾರು 1200 ವರ್ಷಗಳ ಇತಿಹಾಸವಿರುವ ಬೆಳ್ಳಾರೆ ಗ್ರಾಮದ ಗೌರಿಪುರಂ ಶ್ರೀ ರಾಜರಾಜೇಶ್ವರಿ ಕ್ಷೇತ್ರಕ್ಕೆ ಇತಿಹಾಸ ತಜ್ಞ, ಪ್ರಾಚ್ಯ ವಸ್ತು ಸಂಶೋಧಕ ನಿವೃತ್ತ ಉಪನ್ಯಾಸಕ ಉಮಾನಾಥ್ ಶೆಣೈ ಮತ್ತು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಉಮೇಶ್ ನಾಯಕ್ ಎ. 9ರಂದು ಭೇಟಿ ನೀಡಿದರು.
ಶ್ರೇಷ್ಠ ಕ್ಷೇತ್ರದಲ್ಲಿ ಜೀರ್ಣೋದ್ಧಾರ ಕಾರ್ಯಗಳು ನಡೆಯುತ್ತಿದ್ದು, ಕಳೆದ ವಾರವಷ್ಟೇ ದೇವಸ್ಥಾನ ನಿರ್ಮಾಣವಾಗುತ್ತಿರುವ ಪರಿಸರದಲ್ಲಿ ಶ್ರಮದಾನದ ಮೂಲಕ ಸ್ವಚ್ಚತಾ ಕಾರ್ಯ ನಡೆಸಿದರು. ಈ ಸಂದರ್ಭದಲ್ಲಿ ಇಲ್ಲಿ ಹಲವಾರು ಕುರುಹುಗಳು ಪತ್ತೆಯಾಗಿದ್ದು, ಇದರ ಬಗ್ಗೆ ಸಂಶೋಧಕರ ಅಭಿಪ್ರಾಯ ಸಂಗ್ರಹಿಸುವುದೆಂದು ಸಮಿತಿಯಲ್ಲಿ ನಿರ್ಣಯಿಸಲಾಗಿತ್ತು. ಆ ಪ್ರಕಾರ ಇಂದು ಸಂಶೋಧಕರು ಭೇಟಿ ನೀಡಿ ಹಿಂದೆ ಇದ್ದ ದೇವಸ್ಥಾನದ ಜಾಗ,
ದೇವರ ಜಲಕದ ಜಾಗ ಪರ್ತಿಕೆರೆ, ಕಾಸಾಗುವೆಲ್, ಗೌರಿಹೊಳೆಯಲ್ಲಿ ಕಲ್ಲಿನ ಮೇಲೆ ಬರೆದಿರುವ ಶಾಸನಗಳನ್ನು ಪರಿಶೀಲಿಸಿದರು. ಈ ಸಂದರ್ಭದಲ್ಲಿ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಗೋಪಾಲಕೃಷ್ಣ ನಾಯಕ್ ಪೊಸವಳಿಗೆ, ಆಡಳಿತ ಸಮಿತಿ ಅಧ್ಯಕ್ಷ ಚಂದ್ರಹಾಸ ಮಣಿಯಾಣಿ ಪಡ್ಪು, ಜೀರ್ಣೋದ್ಧಾರ ಸಮಿತಿ ಕೋಶಾಧಿಕಾರಿ ಇಡ್ಯಡ್ಕ ಮೋಹನ ಗೌಡ, ಪ್ರಧಾನ ಕಾರ್ಯದರ್ಶಿ ರಾಮಕೃಷ್ಣ ಭಟ್ ಕುರುಂಬುಡೇಲು, ಸಮಿತಿ ಪದಾರ್ಥಿಗಳು ಮತ್ತು ಸದಸ್ಯರಾದ ಜಗದೀಶ್ ರೈ ತಂಬಿನಮಕ್ಕಿ, ಪುರಂದರ ಗೌಡ ಸಪ್ತಗಿರಿ, ಮನು ತೊಂಡಚ್ಚನ್, ಆಡಳಿತ ಸಮಿತಿ ಕಾರ್ಯದರ್ಶಿ ಕುಶಾಲಪ್ಪ ಗೌಡ ಮಣಿಮಜಲು, ನವೀನ್ ಕುಮಾರ್ ರೈ ತಂಬಿನಮಕ್ಕಿ, ರಮೇಶ್ ನಾಯಕ್ ಪನ್ನೆ, ಹರೀಶ್ ಕುಲಾಲ್ ಗೌರಿಪುರಂ, ನವೀನ್ ಕುಮಾರ್ ಗೌರಿಪುರಂ, ಪದ್ಮನಾಭ ಭಟ್, ವಾಸುದೇವ ಗೌಡ ಗೌರಿಪುರಂ, ರಮೇಶ್ ಪಡ್ಪು, ರಾಧಾಕೃಷ್ಣ ಕುಲಾಲ್ ಮಣಿಮಜಲು ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.